ಆಲೆಟ್ಟಿ: ಕೋಲ್ಚಾರು ರಸ್ತೆಯ ಕುಂಭಕೋಡು ಎಂಬಲ್ಲಿ ಕಂದಕಕ್ಕೆ ಉರುಳಿದ ಕಾರು- ಪ್ರಯಾಣಿಕರು ಪಾರು

0

ನಾರ್ಕೋಡಿನಿಂದ ಕೋಲ್ಚಾರು ರಸ್ತೆಯ ಮೂಲಕ ಕೇರಳದ ಬಂದಡ್ಕಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚಲಿಸಿ ಕಂದಕಕ್ಕೆ ಉರುಳಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

ಬೆಂಗಳೂರಿನಿಂದ ಸುಳ್ಯದ ವರೆಗೆ ಬಸ್ಸಿನಲ್ಲಿ ಬಂದ ಯುವಕರು ಬಸ್ ನಿಲ್ದಾಣದಿಂದ ಕಾರಿನ ಮೂಲಕ ತಮ್ಮ ಊರಿಗೆ ಮರಳುವ ವೇಳೆಯಲ್ಲಿ ದುರ್ಘಟನೆ ನಡೆದಿದೆ.


ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಚಲಿಸಿದ ಕಾರು ಪಲ್ಟಿಯಾಗಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.