ಮುರುಳ್ಯ ಶಾಂತಿನಗರ ಶಾಲಾ ಪ್ರಾರಂಭೋತ್ಸವ

0

ಮುರುಳ್ಯ ಶಾಂತಿನಗರ ಶಾಲಾ ಪ್ರಾರಂಭೋತ್ಸವ ಮೇ. 31ರಂದು ‌ನಡೆಯಿತು.

ಹೊಸತಾಗಿ ಸೇರ್ಪಡೆಗೊಂಡ
ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಪುಷ್ಪಾವೃಷ್ಠಿ ಮೂಲಕ ಸಂಭ್ರಮ ಸಡಗರದಿಂದ ಸ್ವಾಗತ ಮಾಡಲಾಯಿತು. ಶಾಲಾ ವಾದ್ಯಗೋಷ್ಠಿ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಶಿಸ್ತುಬದ್ದವಾಗ ಸ್ವಾಗತ ಗಮನ ಸೆಳೆಯಿತು. ವಿದ್ಯಾರ್ಥಿಗಳಿಂದಲೇ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನನ್ನು ವಿನೂತನವಾಗಿ ಉದ್ಘಾಟಸಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮತ್ತು ಪಠ್ಯ ಪುಸ್ತಕವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಸಂತ ನಡುಬೈಲು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳಿದರು. SDMC ಅಧ್ಯಕ್ಷರಾದ ದಿನೇಶ ನಡುಬೈಲು, ಉಪಾಧ್ಯಕ್ಷರಾದ ಶ್ರೀಮತಿ ಬೇಬಿ, CRP ಜಯಂತ ಕಳತ್ತಜೆ, ಮುಖ್ಯಗುರುಗಳಾದ ಶ್ರೀಮತಿ ಸೀತಾ ವಿ, ಸಹಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.