
ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಬಾಳುಗೋಡು ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಡಿ.7 ರಂದು ನಡೆಯಿತು.
















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಸುಳ್ಯ ಉಪಾಧ್ಯಕ್ಷ ಸುಧೀರ್ ದೇವ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಳುಗೋಡು ಶಾಲಾ ಮುಖ್ಯ ಶಿಕ್ಷಕಿ ಶುಭ .ಕೆ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸ್ತ್ರೀ ಶಕ್ತಿ ಸಂಘ ಬಾಳುಗೋಡು ಇದರ ಅಧ್ಯಕ್ಷೆ ಲಲಿತ. ಬಿ,
ಪಯಸ್ವಿನಿ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯ ಇದರ ನಿರ್ದೇಶಕಿ
ಹರ್ಷಿಣಿ ಕುಮಾರಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶುಭ, ಅಂಗನವಾಡಿ ಕಾರ್ಯಕರ್ತೆ ತೀರ್ಥ ಕುಮಾರಿ ಶುಭಹಾರೈಸಿದರು. ಜಯಪ್ರಕಾಶ್ ಸಂಕೇಶ ಸ್ವಾಗತಿಸಿ, ಚೇತನ್ ಎಲಿಮಲೆ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿ ಸಂಚಾಲಕ ಹರ್ಷಿತ್ ದಾತಡ್ಕ, ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಸಾದ್ ಬೊಳ್ಳೂರು, ಮನೀಶ್ ಕಡಪಳ,ಬಾಲಕೃಷ್ಣ ಹೊನ್ನೆಕಡ್ಪು ಉಪಸ್ಥಿತರಿದ್ದರು.










