ಪದವೀಧರ ವಿ.ಪ. ಕ್ಷೇತ್ರ: ಸುಳ್ಯದಲ್ಲಿ ಶೇ. 78.35 ಮತದಾನ

0


ಶಿಕ್ಷಕರ ವಿ.ಪ. ಕ್ಷೇತ್ರ : ಸುಳ್ಯದಲ್ಲಿ ಶೇ. 81.85 ಮತದಾನ


ನೈರುತ್ಯಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಳ್ಯದಲ್ಲಿ ಚುನಾವಣೆ ನಡೆದಿದ್ದು, ಸುಳ್ಯ ಕ್ಷೇತ್ರದಲ್ಲಿರುವ 1395 ಪದವೀಧರ ಮತದಾರರಲ್ಲಿ 1093 ಮಂದಿ ಮತ ಚಲಾಯಿಸಿದ್ದು, ಶೇ.78.35 ಮತದಾನವಾಗಿದೆ.


ಸುಳ್ಯ ತಾಲೂಕಿನಲ್ಲಿರುವ ಶಿಕ್ಷಕರ ಕ್ಷೇತ್ರದ 529 ಮತದಾರರಲ್ಲಿ 433 ಮಂದಿ ಮತ ಚಲಾಯಿಸಿದ್ದು, ಶೇ. 81.85 ಮತದಾನವಾಗಿದೆ.
ಸುಳ್ಯ ತಾಲೂಕಿನ ಕಚೇರಿಯ ಮತಗಟ್ಟೆಯಲ್ಲಿ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 1162 ಮತದಾರರಲ್ಲಿ 921 ಮಂದಿ ಮತ ಚಲಾಯಿಸಿದ್ದಾರೆ. ಪಂಜ ನಾಡಕಚೇರಿಯ ಮತಗಟ್ಟೆಯಲ್ಲಿ 233 ಮಂದಿಯಲ್ಲಿ 172 ಮಂದಿ ಮತ ಚಲಾಯಿಸಿದ್ದಾರೆ.


ಸುಳ್ಯ ತಾಲೂಕು ಕಚೇರಿಯ ಮತಗಟ್ಟೆಯಲ್ಲಿ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೪೭೩ ಮಂದಿ ೩೮೫ ಮಂದಿ ಮತ ಚಲಾಯಿಸಿದ್ದಾರೆ. ಪಂಜ ನಾಡಕಚೇರಿಯ ಮತಗಟ್ಟೆಯಲ್ಲಿ 56 ಮಂದಿಯಲ್ಲಿ 48 ಮಂದಿ ಮತ ಚಲಾಯಿಸಿದ್ದಾರೆ.