ಚೊಕ್ಕಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಯೂರಿ ಯುವತಿ ಮಂಡಲ (ರಿ) ಚೊಕ್ಕಾಡಿ ಇದರ ವತಿಯಿಂದ ಚೊಕ್ಕಾಡಿ ವಠಾರ ದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಚಿನ್ನಪ್ಪ ಗೌಡ ಹಾಗೂ ಅಧ್ಯಕ್ಷೆ ಸ್ವಾತಿ ಪದವು ಉಪಸ್ಥಿತರಿದ್ದರು.

ಪಾರ್ವತಿ ನೇನಾರು ಪ್ರಾರ್ಥಿಸಿದರು, ಉಷಾಲತಾ ಪಡ್ಪು ಕಾರ್ಯಕ್ರಮವನ್ನು ನಿರೂಪಿಸಿದರು, ಪೂರ್ಣಿಮಾ ಚಿಕ್ಕಿನಡ್ಕ ಸ್ವಾಗತಿಸಿ ಮಧುಶ್ರೀ ಕೇನಡ್ಕ ವಂದಿಸಿದರು

ಈ ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಸದಸ್ಯರು, ಪುಟಾಣಿ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು