ದೊಡ್ಡೇರಿ : ಶಾಲಾ‌ ಮುಖ್ಯ ಶಿಕ್ಷಕರಿಂದ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ

0

ಅಜ್ಜಾವರ ‌ಗ್ರಾಮದ ದೊಡ್ಡೇರಿ‌ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣಾನಂತ ಸರಳಾಯರು ಲೇಖನ ಸಾಮಾಗ್ರಿ – ಕೊಡೆಗಳನ್ನು ಕೊಡುಗೆ ನೀಡಿದ್ದು ಅದರ ವಿತರಣೆ ‌ಜೂ.6ರಂದು‌ ನಡೆಯಿತು.

ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಮಕ್ಕಳಿಗೆ‌ ಕೊಡುಗೆಗಳನ್ನು ವಿತರಿಸಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಡಿ.ಕೆ. ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ಯು.ಕೆ., ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಆಶಾ ನಾಯಕ್, ಶಿಕ್ಷಣ ಸಂಯೋಜಕಿ ಸಂಧ್ಯಾ, ಹಾಗೂ ಪೋಷಕರು ಉಪಸ್ಥಿತರಿದ್ದರು.