ಕುರುಂಜಿಗುಡ್ಡೆ ಇನ್ ಡೋರ್ ಸ್ಟೇಡಿಯಂ ತಡೆಬೇಲಿಗೆ ಗುದ್ದಿದ ಕಾರು

0

ಸುಳ್ಯದ ಕುರುಂಜಿಗುಡ್ಡೆ ಇನ್ ಡೋರ್ ಸ್ಟೇಡಿಯಂ ನ ತಡೆಬೇಲಿಗೆ ಕಾರೊಂದು ಗುದ್ದಿ ತಡೆಬೇಲಿ ಕೆಳಗೆ ಬಿದ್ದಿರುವ ಘಟನೆ ವರದಿಯಾಗಿದೆ.

ಕುರುಂಜಿಗುಡ್ಡೆ ಇನ್ ಡೋರ್ ಸ್ಟೇಡಿಯಂ ಪಕ್ಕದಲ್ಲಿ ನ.ಪಂ. ಪಾರ್ಕ್ ಇದ್ದು ಅಲ್ಲಿಗೆ ಬೆಳಗ್ಗಿನಿಂದ ಸಂಜೆ ವರೆಗೆ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬರುತ್ತಿರುತ್ತಾರೆ.

ಹಾಗೆ ಇಂದು‌ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಸ್ಟೇಡಿಯಂ ಎದುರಿನ ಜಾಗದಲ್ಲಿ ಕಾರು ರೇಸ್ ಮಾಡಿದರೆಂದೂ ಈ ವೇಳೆ ಕಾರು ತಡೆಬೇಲಿಗೆ ಢಿಕ್ಕಿಯಾಗಿದೆ. ತಡೆಬೇಲಿ ಕೆಳಗೆ ಬಿದ್ದಿದೆ.‌

ಸ್ಥಳಕ್ಕೆ ನ.ಪಂ. ಮಾಜಿ ಅಧ್ಯಕ್ಷ – ವಾರ್ಡ್ ಸದಸ್ಯ ವಿನಯ ಕುಮಾರ್ ಕಂದಡ್ಕ, ನ.ಪಂ. ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕುರುಂಜಿಗುಡ್ಡೆ ಯಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ವಿದ್ಯಾರ್ಥಿಗಳು, ಸಾರ್ವಜನಿಕರು‌ ಬರುತ್ತಿದ್ದಾರೆ. ಇಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ನಿಯಮ ರೂಪಿಸುವಂತೆ ಸ್ಥಳೀಯ ರು ಆಗ್ರಹಿಸಿದ್ದಾರೆ.