








ಕೆಲವು ದಿನಗಳ ಹಿಂದೆ ಬಿದ್ದು ಸಿಕ್ಕಿದ್ದ ನಗದು ದಾಖಲೆಗಳಿದ್ದ ಪರ್ಸನ್ನು ಅದರ ವಾರೀಸುದಾರರಿಗೆ ಡಿ. 11ರಂದು ಹಸ್ತಾಂತರಿಸಿದ್ದಾರೆ.
ಡಿ. 2ರಂದು ವಸಂತ ಕಲ್ಪಡ ರವರಿಗೆ ಪಂಜಿಗಾರು ಬಳಿ ಪರ್ಸ್ ಬಿದ್ದು ಸಿಕ್ಕಿತ್ತು. ಅದನ್ನು ಅವರು ಪಂಜಿಗಾರಿನ ಜಯಪ್ರಕಾಶ್ ಎಂಬವರಲ್ಲಿ ನೀಡಿ ಸುದ್ದಿಗೆ ಮಾಹಿತಿ ನೀಡಿದ್ದರು. ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪರ್ಸ್ ಕಳೆದುಕೊಂಡ ವ್ಯಕ್ತಿ ದೂರವಾಣಿ ಮೂಲಕ ಜಯಪ್ರಕಾಶ್ ರನ್ನು ಸಂಪರ್ಕಿಸಿ ವಿವರ ನೀಡಿದ ಮೇರೆಗೆ ಪರ್ಸ್ ನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.










