ತರಗತಿ ಕೊಠಡಿಗಳಿಗೆ ಹಾನಿ
ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಹಿಂಬದಿ ನಿರಂತರ ಮಳೆಯ ಕಾರಣದಿಂದ ಬಾರೀ ಪ್ರಮಾಣದಲ್ಲಿ ಬರೆ ಕುಸಿತಗೊಂಡಿದ್ದು, ತರಗತಿ ಕೊಠಡಿಗಳಿಗೆ ಹಾನಿಯಾಗಿರುವ ಘಟನೆ ವರದಿಯಾಗಿದೆ.















ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಣೆ ಮಾಡಿದ್ದು, ಬರೆ ಕುಸಿಯುವ ಸಂದರ್ಭದಲ್ಲಿ ಶಾಲೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ.
ಕಳೆದ ವರ್ಷವೂ ಹಲವು ಬಾರಿ ಇಲ್ಲಿ ಶಾಲೆಯ ಮೇಲೆ ಬರೆ ಕುಸಿದಿತ್ತು.









