ಶಶಾಂಕ್ ಓಟೆಡ್ಕರವರಿಗೆ ಇಂಜಿನಿಯರಿಂಗ್ ವಿಭಾಗದ ಮೆಕಾಟ್ರಾನಿಕ್ಸ್ ನಲ್ಲಿ 3 ನೇ ರ್‍ಯಾಂಕ್

0

ಮಂಗಳೂರು ಇನ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಇಂಜಿನಿಯರಿಂಗ್ ನ ಬಿಇ Mechatronics ವಿಭಾಗದ 2023 24 ನೇ ಸಾಲಿನ ವಿದ್ಯಾರ್ಥಿಯಾದ ಸುಳ್ಯ ತಾಲೂಕು ಅರಂತೋಡು ಗ್ರಾಮದ ಓಟೆಡ್ಕ ಮನೆಯ ಶಶಾಂಕ ಒ.ಎಂ ರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 3ನೇ ರ್‍ಯಾಂಕ್ ಗಳಿಸಿರುತ್ತಾರೆ.

ಇವರು ಕೊಚ್ಚಿನ್ ನಲ್ಲಿ CISF ಸಬ್ ಇನ್ ಸ್ಪೆಕ್ಟರ್ ಆಗಿರುವ ಮಾಧವ ಗೌಡ ಹಾಗೂ ಪದ್ಮಾಕ್ಷಿ ದಂಪತಿಯ ಪುತ್ರರಾಗಿದ್ದು ಪ್ರಸ್ತುತ ಇವರು RINEX TECHNOLOGIES PRIVATE LIMITED Company ಯಲ್ಲಿ BUSINESS STRATEGIST ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇವರು ಜು.18 ರಂದು ನಡೆಯಲಿರುವ 24 ನೇ VTU , ಬೆಳಗಾವಿ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.