ಸುಳ್ಯ ಗೌಡರ ಯುವ ಸೇವಾ ಸಂಘ ನೂತನ ತಂಡದ ಪದಪ್ರದಾನ ‌ಸಮಾರಂಭ

0

ಸಮುದಾಯದ ಸಾಧಕರಿಗೆ ಸನ್ಮಾನ, ಸೋಬಾನೆ ಸೊಗಡು ಹಾಡುಗಾರರಿಗೆ ಗೌರವಾರ್ಪಣೆ

ಸೋಬಾನೆ ಸೊಗಡು ಕಾರ್ಯಕ್ರಮ ಪ್ರಸ್ತುತಪಡಿಸಿದ ಸುದ್ದಿ ಗೆ ಅಭಿನಂದನೆ

ಸುಳ್ಯ‌ ಗೌಡರ ಯುವ ಸೇವಾ ಸಂಘ ಇದರ ಮಾತೃ ಸಂಘ, ತಾಲೂಕು ಮಹಿಳಾ ಘಟಕ, ತರುಣ ಘಟಕ ಹಾಗೂ ಸುಳ್ಯ ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ‌ಜು.27ರಂದು ಸುಳ್ಯದ ಕೊಡಿಯಾಲಬೈಲು ಗೌಡರ ಸಮುದಾಯ ಭವನದಲ್ಲಿ ‌ನಡೆಯಿತು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.

ಪಂಜ ವಲಯಾರಣ್ಯಾಧಿಕಾರಿ ಗಿರೀಶ್ ಆರ್ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.

ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಸಮುದಾಯ ಭವನದ ಅಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತಾಲೂಕು ಮಹಿಳಾ ಘಟಕ ನಿಕಟಪೂರ್ವಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು, ತರುಣ ಘಟಕದ ನಿಕಟ ಪೂರ್ವಾಧ್ಯಕ್ಷ ರಜತ್ ಅಡ್ಕಾರು, ಗೌಡ ಸಂಘದ ನಿಕಟ ಪೂರ್ವ ಕೋಶಾಧಿಕಾರಿ ಚಂದ್ರಶೇಖರ ಮೇರ್ಕಜೆ ಮುಖ್ಯ ಅತಿಥಿಗಳಾಗಿದ್ದರು.

ಪದಪ್ರದಾನ : ಮಾತೃ ಘಟಕದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಕಾರ್ಯದರ್ಶಿ ಶ್ರೀಮತಿ ಸವಿತಾ ಸಂದೇಶ್, ಕೋಶಾಧಿಕಾರಿ ಶ್ರೀಮತಿ ಜಯಶ್ರೀ ರಾಮಚಂದ್ರ, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ.,‌ ಕಾರ್ಯದರ್ಶಿ ಹೇಮಂತ್ ನಾರ್ಕೋಡು, ಕೋಶಾಧಿಕಾರಿ ರೂಪೇಶ್ ಪೂಜಾರಿಮನೆ, ನಗರ ಘಟಕದ ಅಧ್ಯಕ್ಷ ರಾಕೇಶ್ ಕುಂಟಿಕಾನ, ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ನಗರ ಮಹಿಳಾ‌ ಘಟಕ ಅಧ್ಯಕ್ಷೆ ಹರ್ಷಾ ಕರುಣಾಕರ, ಕಾರ್ಯದರ್ಶಿ ಸುಜಾತ ಕುರುಂಜಿ ಯವರಿಗೆ ಸಮಾರಂಭದಲ್ಲಿ ಗೌಡ ಸಂಘದ ನಿಕಟಪೂರ್ವ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.

ಸನ್ಮಾನ :

ನಾರಿ ಶಕ್ತಿ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೃಷ್ಠಿ ಮಲ್ಕಜೆ, ಎಂ.ಡಿ.ಎಸ್. ನಲ್ಲಿ ಚಿನ್ನದ ಪದಕ ಪಡೆದ ಡಾ.ಸಂದೀಪ್ ಬಿರ್ಮುಕಜೆ, ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಆಶೀಶ್ ಆನಂದ ಖಂಡಿಗ, ಯೋಗ ಸಾಧಕರಾದ ಕು. ಕ್ಷಮಾ ಮುಡೂರು‌ ಹಾಗೂ ವಿಧಾತ್ ಗೌಡ ಮುಡೂರುರನ್ನು ಸನ್ಮಾನಿಸಲಾಯಿತು.

ಮೈಕ್ ಸೆಟ್ ಹಸ್ತಾಂತರ : ಎಂ.ಜಿ.ಎಂ. ಶಾಲೆ‌ ಕೊಡಿಯಾಲಬೈಲು ಇದರ ವತಿಯಿಂದ 80 ಸಾವಿರ ವೆಚ್ಚದಲ್ಲಿ ಗೌಡ ಸಮುದಾಯ ಭವನಕ್ಕೆ ಕೊಡುಗೆಯಾಗಿ ನೀಡಿದ ಮೈಕ್ ಸೆಟ್ ನ್ನು ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು. ಎಂ.ಜಿ.ಎಂ. ಶಾಲಾ ಸಂಚಾಲಕ ಮೈಕ್ ಸೆಟ್ ಹಸ್ತಾಂತರ ಕುರಿತು ವಿವರ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಶಿಕ್ಷಕಿ ಚಿತ್ರ ಲೇಖಾರನ್ನು ಗೌರವಿಸಲಾಯಿತು.

ಆಮಂತ್ರಣ ಬಿಡುಗಡೆ :

ನಗರ ಗೌಡ ಘಟಕದಿಂದ ಆ.4 ರಂದು ಗೌಡ ಸಮುದಾಯ ಭವನದಲ್ಲಿ ನಡೆಯುವ ಆಟಿಯ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ನಡೆಯಿತು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಬಿಡುಗಡೆಗೊಳಿಸಿದರು.

ಸೋಬಾನೆ ಸೊಗಡು : ಗೌರವ

ಸುಳ್ಯ ಸುದ್ದಿ ಚಾನೆಲ್ ನಲ್ಲಿ ಪ್ರಸಾರಗೊಂಡ ಸೋಬಾನೆ ಸೊಗಡು ಕಾರ್ಯಕ್ರಮದಲ್ಲಿ ಸೋಬಾನೆ ಹಾಡಿದವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮ ಸಂಯೋಜಿಸಿ ನಿರ್ದೇಶಿಸಿದ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕರೆ ಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕರಿಸಿದ ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಚಾನೆಲ್ ಬಳಗದ ಯತೀಶ್ ಕದ್ರ, ರಕ್ಷಿತ್ ಕುಕ್ಕುಜಡ್ಕ,, ಕೌಶಿಕ್ ಬಳ್ಳಕರನ್ನು ಗೌರವಿಸಲಾಯಿತು.

ಮಹಿಳಾ ಘಟಕದ ನಿಕಟ ಪೂರ್ವಾಧ್ಯಕ್ಷೆ ಶ್ರೀಮತಿ ಪುಷ್ಪಾ ಹಾಗೂ ರಾಧಾಕೃಷ್ಣ ಮಾಣಿಬೆಟ್ಟು ರವರು ಗೌರವ ನೆರವೇರಿಸಿದರು.

ಭಜನಾ ಕಮ್ಮಟ : ಬೆಳಗ್ಗೆ ರಾಮಕೃಷ್ಣ ಕಾಟುಕುಕ್ಕೆ ಯವರಿಂದ ಭಜನಾ ಕಮ್ಮಟ ನಡೆಯಿತು. ಸಭಾಂಗಣದಲ್ಲಿ ಸೇರಿದವರೆಲ್ಲರು ಭಜನೆಗೆ ಧ್ವನಿಯಾದರು.

ಶ್ರೀಮತಿ ಕುಸುಮಾ ಮತ್ತು ಜನಾರ್ದನ ಕೊಳೆಂಜಿರೋಡಿ ದಂಪತಿ ಪ್ರಾರ್ಥನೆ ಹಾಡಿದರು. ನಿಕಟ ಪೂರ್ವಾಧ್ಯಕ್ಷ ಚಂದ್ರಾ ಕೋಲ್ಚಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಕಾರ್ಯಕ್ರಮ ‌ನಿರೂಪಿಸಿದರು. ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ವಂದಿಸಿದರು.