ಕಲ್ಲಪ್ಪಳ್ಳಿ : ಪತ್ತುಕುಡಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

0

ವಿಪರೀತ ಮಳೆಯಿಂದಾಗಿ ಪತ್ತುಕುಡಿಯ ಪ್ರವೀಣ್ ಎಂಬವರ ದನದ ಕೊಟ್ಟಿಗೆ ಮೇಲೆ ಗುಡ್ಡಜರಿದು ಸಂಪೂರ್ಣ ಹಾನಿಗೊಂಡಿದೆ. ಈ ಪ್ರದೇಶದಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ವಿಪರೀತ ನೀರು ಹಾಗೂ ಭೋರ್ಗರೆಯುವ ಶಬ್ದದಿಂದ ಇಲ್ಲಿಯ ಎಲ್ಲಾ ನಿವಾಸಿಗಳು ಭಯಭೀತರಾಗಿ ತಮ್ಮ ಮನೆಗಳನ್ನು ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದರು. ವಿಷಯ ತಿಳಿದ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಪನತ್ತಡಿ ಪಂಚಾಯತ್ ಅಧ್ಯಕ್ಷರ ಹಾಗೂ ವೆಳ್ಳೆರಿಕುಂಡು ತಹಶೀಲ್ದಾರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಪಂಚಾಯತ್ ಅಧ್ಯಕ್ಷರು, ವಾರ್ಡ್ ಸದಸ್ಯರು, ವಿಲೇಜ್ ಆಫೀಸರ್, ಅರಣ್ಯಾಧಿಕಾರಿಗಳೋಂದಿಗೆ ಬ್ಲಾಕ್ ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರು. ಪರಿಸ್ಥಿತಿ ಮನಗಂಡು ಅಲ್ಲಿ
ವಾಸವಿರುವ ಎಲ್ಲಾ ನಿವಾಸಿಗಳನ್ನು ಕೂಡಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡುವಂತೆ ಆದೇಶಿಸಿದರು.
ಪತ್ತುಕುಡಿ ಪ್ರದೇಶದಲ್ಲಿ ಸುಮಾರು 10 ಮನೆಗಳಿದ್ದು ಇದರಲ್ಲಿ 8 ಮನೆಗಳಲ್ಲಿ ಮಾತ್ರ ವಾಸವಿದ್ದು ಈ ಮನೆಗಳಲ್ಲಿ ವಾಸವಿದ್ದ
26 ಜನರನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 11 ಮಹಿಳೆಯರು, 12 ಪುರುಷರು, 3 ಮಕ್ಕಳಿದ್ದಾರೆ,
ಘಟನಾ ಸ್ಥಳಕ್ಕೆ ರಾಜಪುರಂ ಸಿಐ, ಎಸ್ ಐ, ಜನ ಮೈತ್ರಿ ಪೊಲೀಸ್ ತಂಡ, ಮೆಡಿಕಲ್ ಆಫೀಸರ್, ಹೆಲ್ತ್ ಇನ್ಸ್ಪೆಕ್ಟರ್ ತಂಡ ಆಗಮಿಸಿತ್ತು ಎಂದು ತಿಳಿದು ಬಂದಿದೆ.