ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಸಂತ ಫಿಲೋಮೀನಾ ಕಾಲೇಜು (ಸ್ವಾಯತ್ತ ), ಪುತ್ತೂರು ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಡಾ. ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಗ್ರಾಮಪಂಚಾಯತ್ ಕನಕಮಜಲು,
ಯುವಕ ಮಂಡಲ ( ರಿ) ಕನಕಮಜಲು
ಇವರ ನೇತೃತ್ವದಲ್ಲಿ
ರೋಟರಿ ಕ್ಲಬ್ ಪುತ್ತೂರು, ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾ ಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಚಿಕಿತ್ಸಾ ಶಿಬಿರ ಡಿ.7 ರಂದು ಗ್ರಾಮ ಪಂಚಾಯತ್ ಕನಕಮಜಲು ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಶಾರದಾ ಉಗ್ಗಮೂಲೆ ವಹಿಸಿದರು. ಶ್ರೀ ಲಕ್ಷ್ಮಿ ನಾರಾಯಣ ಕಜ್ಜೆಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಲತಾ, ಶ್ರೀಧರ ಕುತ್ಯಾಳ, ಹರ್ಷಿತ್ ಉಗ್ಗಮೂಲೆ, ಅಬ್ದುಲ್ ಹಮೀದ್, ಶ್ರೀಮಣಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.









ಪ್ರಾಥನೆಯನ್ನು ಪ್ರತೀಕ್ಷಾ ಕುಮಾರಿ ಮತ್ತುಪ್ರೇಮಿ ಮಾಡಿದರು. ಸ್ವಾಗತ ಭಾಷಣ ವನ್ನು ಕುಮಾರಿ ಪ್ರೇಮಿ ನೆರೆವಿರಿಸಿದರು.
ಕಣ್ಣಿನ ತಪಾಸಣಾ ಶಿಬಿರಕ್ಕೆ ಸುಮಾರು 75 ಕ್ಕಿಂತ ಹೆಚ್ಚಿನ ಜನರು ಬಂದು ಸದುಪಯೋಗ ಪಡೆದುಕೊಡರು.
ಕಾರ್ಯಕ್ರಮವನ್ನು ನಿಶ್ಚಿತ್. ಎ. ನಿರೂಪಿಸಿ, ಧನ್ಯವಾದವನ್ನು ಚಂದನ್ ಹೊದ್ದೆಟ್ಟಿ ನಡೆಸಿದರು.










