









ಐವತ್ತೊಕ್ಲು ಗ್ರಾಮದ ಬರೆಮೇಲು ನಿವಾಸಿ ಜಯಾನಂದ (56 ವ.) ಎಂಬವರಿಗೆ ಸತತ 3 ಬಾರಿ ಸ್ಟ್ರೋಕ್ ಆಗಿದ್ದು, ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡ ಹೆಂಡತಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಜಯಾನಂದರು ಅನಾರೋಗ್ಯ ಪೀಡಿತರಾದ ಬಳಿಕ ಇವರ ಪತ್ನಿ ಮಾತ್ರ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಜಯಾನಂದರ ಅನಾರೋಗ್ಯ ಉಲ್ಬಣಗೊಂಡು ಏಳಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪತ್ನಿಯೂ ಮನೆಯಲ್ಲಿಯೇ ಉಳಿದ ಗಂಡನ ಆರೈಕೆ ಮಾಡಬೇಕಾಗಿದೆ. ಇವರ ಮೂವರು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಗೆ ಆಧಾರಸ್ಥಂಭವಾಗಿದ್ದ ಜಯಾನಂದರು ಹಾಸಿಗೆ ಹಿಡಿದಿರುವುದರಿಂದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ಇವರ ಆರೋಗ್ಯ ಸುಧಾರಿಸಲು ಚಿಕಿತ್ಸೆಗೆ ಮತ್ತು ಕುಟುಂಬ ನಿರ್ವಹಣೆಗೆ ಸಹೃದಯಿ ದಾನಿಗಳ ನೆರವಿನ ಅವಶ್ಯಕತೆ ಇರುವುದರಿಂದ
ದಯಮಯರಾದ ತಾವುಗಳು ಸಹಾಯ ಹಸ್ತ ಚಾಚಿ ಬಡಪಾಯಿ ಕುಟುಂಬಕ್ಕೆ
ಆಸರೆಯಾಗುವಂತೆ ಈ ಮೂಲಕ ಮನೆಯವರು ವಿನಂತಿಸಿಕೊಂಡಿರುತ್ತಾರೆ.
ನಗದು ಪಾವತಿ ಮಾಡುವ ಖಾತೆ
ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
ಖಾತೆ ಸಂಖ್ಯೆ: 01782250012051
IFSC CODE: CNRB0010178
Mob: 8105106394



