ಎಸ್ಸಿಎಸ್ಪಿ ಯೋಜನೆಯಡಿ ಐ ಸಿ. ಎ.ಆರ್. ಕೇಂದ್ರಿಯ ತೋಟ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು ಕೆ.ವಿ. ಕೆ ದಕ್ಷಿಣ ಕನ್ನಡ ಮತ್ತು ಎನ್ ಆರ್ ಎಲ್ ಎಂ ಸಂಜೀವಿನಿ ಒಕ್ಕೂಟ ಆಶ್ರಯದಲ್ಲಿ ಬಂದಿದ್ದ ತೆಂಗಿನ ಗಿಡಗಳನ್ನು ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಎಸ್ ಸಿ ಫಲಾನುಭವಿಗಳಿಗೆ ಜು 30 ರಂದು ವಿತರಿಸಲಾಯಿತು.
ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿ ವೇಲು , ಉಪಾಧ್ಯಕ್ಷ ಎಸ್. ಕೆ ಹನೀಫ್, ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ವೋಲ್ಗಾ ಡಿಸೋಜಾ , ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಕುಮಾರಿ ನಂದಿತಾ, ಮಾಜಿ ಗ್ರಾಂ. ಪಂ ಅಧ್ಯಕ್ಷ ಜಿ. ಕೆ ಹಮೀದ್, ಜಗದೀಶ್ ರೈ, ಸುಂದರಿ ಮುಂಡಡ್ಕ, ಸದಸ್ಯರುಗಳಾದ ಅನುಪಮಾ , ವಿಮಲಾ , ಲಿಸ್ಸಿ ಮೊನಾಲಿಸಾ, ಸುಶೀಲಾ, ಶೌವಾದ್ ಗೂನಡ್ಕ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಿಲ್ಪಾ ಸನತ್, ಕೃಷಿ ಸಖಿ ಮೋಹಿನಿ ವಿಶ್ವನಾಥ್, ಪಂಚಾಯತ್ ಸಿಬ್ಬಂದಿ ಉಮೇಶ್ , ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.