ಪಂಜದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಅವರಿಗೆ ಅದ್ದೂರಿಯ ಬೀಳ್ಕೊಡುಗೆ ಮತ್ತು ಅಭಿನಂದನೆ

0

ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪಂಜ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ಸನ್ಮಾನ ಸಮಿತಿ ಇದರ ಸಹಯೋಗದೊಂದಿಗೆ 39
ವರುಷ ಸುದೀರ್ಘ ಸೇವೆ ಸಲ್ಲಿಸಿ ಜು.31 ರಂದು ಸೇವಾ ನಿವೃತ್ತಿ ಹೊಂದಿರುವ ಯೋಗೀಶ್ ಚಿದ್ಗಲ್ ರವರ ಬೀಳ್ಕೊಡುಗೆ ಕಾರ್ಯಕ್ರಮ ಆ.3 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ನಡೆಯಿತು.

ಸನ್ಮಾನ ಸಮಿತಿ ಅಧ್ಯಕ್ಷ ಮಾಧವ ಬಿ ಕೆ ಸಭಾಧ್ಯಕ್ಷತೆ ವಹಿಸಿದ್ದರು.

ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಭಾಷಣ ಮಾಡಿ “ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುವುದು ಸವಾಲಿನ ಕೆಲಸ. ಅಂಥ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಕೀರ್ತಿ ಯೋಗೀಶ್ ಸರ್ ಅವರಿಗೆ ಸಲ್ಲಬೇಕು . ಮಾತ್ರವಲ್ಲದೇ ಪಂಜದಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣದ ಹಿಂದೆ ಅವರ ಶ್ರಮ, ಸಮಯ, ಅರ್ಪಣಾ ಮನೋಭಾವ ಕೆಲಸ ಮಾಡಿದೆ ಎಂದರು. ಅನೇಕ ಸಂಘ ಸಂಸ್ಥೆಗಳಲ್ಲಿ ಮತ್ತು ಕಾಲೇಜಿನ ಸಮಗ್ರ ಅಭಿವೃದ್ಧಿಗೆ
ಅವರು ಬಹಳಷ್ಟು ಸೇವೆ ಸಲ್ಲಿಸಿ ಆದರ್ಶರಾಗಿದ್ದಾರೆ.”ಎಂದು ಅವರು ಹೇಳಿದರು.

ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ಸನ್ಮಾನ ಸ್ವೀಕರಿಸಿದರು.ಈ ವೇಳೆ ಅವರ ಪತ್ನಿ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಯೋಗೀಶ್ ಚಿದ್ಗಲ್ ರವರು ಮಾತನಾಡಿ “ರಾಷ್ಟ್ರೀಯ ಹಿರಿಯರ ಕ್ರೀಡಾ ಒಕ್ಕೂಟ, ಹಲವಾರು ದಾನಿಗಳ ‌ಸಹಕಾರದಿಂದಾಗಿ ನನ್ನ ಮುಂದಾಳತ್ವ ದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕೋಟಿ ಚೆನ್ನಯ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದೆ. ಶಿಕ್ಷಕರು, ಉಪನ್ಯಾಸಕ,ವಿದ್ಯಾರ್ಥಿಗಳು , ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದಿಂದ ಕ್ರೀಡಾ ಕೂಟಗಳು ಯಶಸ್ವಿಯಾಗಿ ನಡೆದಿದೆ, ಮನೆಯವರು , ಕುಟುಂಬದಸ್ಥರ ಸಂಪೂರ್ಣ ಸಹಕರಿಸಿದ್ದಾರೆ.ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ”. ಎಂದು ಹೇಳಿದರು.

.ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕಿ ಶ್ರೀಮತಿ ಶೀಲಾವತಿ ಕೊಳಂಬೆ ಸನ್ಮಾನಿಸಿ ಮಾತನಾಡಿ. “ಯೋಗೀಶ್ ರು ಕರ್ಮಯೋಗಿ.ಬಳಷ್ಟು ಪ್ರೀತಿ ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಂಸ್ಥೆಯನ್ನು ಬೆಳೆಸಿ ಬಹಳಷ್ಟು ಹೆಸರು ಗಳಿಸಿದ್ದಾರೆ.”ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವಿಶ್ರಾಂತ ರಿಜಿಸ್ಟ್ರಾರ್, ನಿವೃತ್ತ ಉಪನ್ಯಾಸಕ ಚಂದ್ರಹಾಸ ರೈ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ. “ಯೋಗೀಶ್ ಚಿದ್ಗಲ್ ರವರು ಕೈಯಿಂದ ಖರ್ಚು ಮಾಡಿ ವಿದ್ಯಾರ್ಥಿಗಳನ್ನು ಕ್ರೀಡಾ ಕೂಟಕ್ಕೆ ಕರೆದುಕೊಂಡು ಹೋದ ಹಲವು ಉದಾಹರಣೆಗಳು ಇದೆ. ಅದರ ಫಲವಾಗಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ,ಬದುಕು ಕಟ್ಟಿದ್ದಾರೆ. ವಿದ್ಯಾರ್ಥಿಗಳ ಸಾಧನೆಗಳ ಹಿಂದೆ ಅತ್ಯಂತ ಹೆಚ್ಚಿನ ಪರಿಶ್ರಮ ಸೇವೆ ಇದೆ”. ಎಂದು ಹೇಳಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ,ಪ್ರಭಾರ
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು ಕೆ, ದೈಹಿಕ ಶಿಕ್ಷಣ ಪರಿವೀಕ್ಷಾಣಾಧಿಕಾರಿ ಶ್ರೀಮತಿ ಆಶಾ ನಾಯಕ್ , ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಮುಖ್ಯ ಶಿಕ್ಷಕ ಪುರಂದರ ಪನ್ಯಾಡಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿನ್ನಪ್ಪ ಕಾಣಿಕೆ,ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸೋಮಶೇಖರ ಬಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಯೋಗೀಶ್ ಚಿದ್ಗಲ್ ರವರು ಅವರ ಶಿಕ್ಷಕರಾದ ಈಶ್ವರ ಭಟ್ ಮಂಜಳಗಿರಿ, ರುಕ್ಮ ನಾಳ ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ಅವರ ಶಿಷ್ಯರನ್ನು ಗುರುತಿಸಿ ಗೌರವಿಸಿದರು.

ಅದ್ದೂರಿಯ ಮೆರವಣಿಗೆ:
ಮುಂಜಾನೆ ಪಂಜ ಪೇಟೆಯಿಂದ ಕಾಲೇಜುಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ರವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಮೆರವಣಿಗೆಯಲ್ಲಿ ವಾಹನಗಳು, ಸಂಘಟಕರು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು
ಊರ-ಪರವೂರ ಜನ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ರಚನಾ ಚಿದ್ಗಲ್ಲು ಪ್ರಾರ್ಥಿಸಿದರು. ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ನಿರ್ಮಲಾಕ್ಷಿ ಸನ್ಮಾನ ಪತ್ರ ವಾಚಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಮುಖ್ಯ ಶಿಕ್ಷಕ ಪುರಂದರ ಪನ್ಯಾಡಿ ವಂದಿಸಿದರು.