ಅರಂತೋಡು: ಟಿಪ್ಪರ್ ಲಾರಿಯ ಬ್ಯಾಟರಿ ಕಳವು; ಪ್ರಕರಣ ದಾಖಲು

0

ಅರಂತೋಡು ಪೇಟೆ ಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಬ್ಯಾಟರಿ ಕಳವು ಮಾಡಿರುವ ಘಟನೆ ಆ.4ರಂದು ನಡೆದಿದೆ.

ಚರಣ್ ಅಡ್ಕಬಳೆ ಮಾಲಕತ್ವದ ಟಿಪ್ಪರ್ ನ್ನು ಅರಂತೋಡಿನಲ್ಲಿರುವ ಅಡ್ಕಬಳೆ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದರು, ಈ ವೇಳೆ ಯಾರು ಇಲ್ಲದ ಸಮಯ ನೋಡಿ ಟಿಪ್ಪರ್ ನ ಬ್ಯಾಟರಿಯನ್ನು ಕಳ್ಳರು ಕಳವು ಮಾಡಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತಿನ ಮೌಲ್ಯ ಸುಮಾರು 12 ಸಾವಿರ ಎಂದು ಅಂದಾಜಿಸಲಾಗಿದೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.