ಆಲೆಟ್ಟಿ ಸದಾಶಿವ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರಪಂಚಮಿ ಆಚರಣೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ಇಂದು ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ನಾಗದೇವರಿಗೆ ಕ್ಷೀರಾಭಿ ಷೇಕ ಮತ್ತು ಸಿಯಾಳಾಭಿಷೇಕ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಸದಸ್ಯರಾದ ಮಮತಾ ನಾರ್ಕೋಡು, ನಳಿನಿ ರೈ ಆಲೆಟ್ಟಿ, ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಭಜನಾ ಸಂಘದ ಗೌರವ ಸಲಹೆಗಾರ ಸುಧಾಮ ಆಲೆಟ್ಟಿ,ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ,ಜೀರ್ಣೋದ್ಧಾರ ಸಮಿತಿಯ ಸದಸ್ಯರು,
ಸೇವಾ ಸಮಿತಿ ಸದಸ್ಯರು, ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ನೂರಾರು ಮಂದಿ ಭಕ್ತಾದಿಗಳು ಹಾಲು ಸೀಯಾಳ ತಂದು ನಾಗನಿಗೆ ಸಮರ್ಪಿಸಿದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.