ಸುಳ್ಯದ ಎನ್.ಎಂ.ಸಿ 1988-91 ನೇ ಸಾಲಿನ ರೋಯಲ್ ಬಿ.ಕಾಂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

0

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ‌ 1988-91 ನೇ ಸಾಲಿನ ರೋಯಲ್ ಬಿ.ಕಾಂ ವಿದ್ಯಾರ್ಥಿಗಳ ಪುನರ್ ಸಮ್ಮಿಲನ ಕಾರ್ಯಕ್ರಮವು
ಆ.10 ರಂದು ಎ.ಪಿ.ಎಂ.ಸಿ.ಸಭಾಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಬಾಲಚಂದ್ರ ಗೌಡ ಸುಳ್ಯ, ಗಿರಿಧರ ಗೌಡ ,ಶ್ರೀಮತಿ ಯಶೋಧ ರಾಮಚಂದ್ರ ರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವಲ್ಲಿ ಪ್ರಯತ್ನಿಸಿದ ಗ್ರೂಪ್ ಅಡ್ಮಿನ್ ಮಧುಸೂಧನ್ ನಾಯರ್, ಪದುಮನಾಥನ್ ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.

ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ
ಕೇರಳ, ಕರ್ನಾಟಕ, ಮುಂಬಯಿ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 39 ಮಂದಿ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು.
ಕಳೆದ 33 ವರ್ಷಗಳ ಹಿಂದೆ ಒಟ್ಟಾಗಿ ವಿದ್ಯಾಭ್ಯಾಸ ಪೂರೈಸಿದ ಎಲ್ಲರೂ ಒಟ್ಟು ಸೇರಿ ತಮ್ಮ ಪರಿಚಯ ತಿಳಿಸಿದರು. ಬಳಿಕ ತಮ್ಮ ಜೀವನದ ಆಗು ಹೋಗುಗಳ ಅನುಭವಗಳನ್ನು ಮೆಲುಕು ಹಾಕಿದರು.


ಈ ಸಂದರ್ಭದಲ್ಲಿ ಶಿಕ್ಷಣ ಭೋದಿಸಿದ ನಿವೃತ್ತ ಶಿಕ್ಷಕರನ್ನು ಎಲ್ಲಾ ಹಿರಿಯ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಿ ಗೌರವಿಸಿದರು. ಹಿರಿಯ ವಿದ್ಯಾರ್ಥಿ
ಅಬ್ದುಲ್ ಲತೀಪ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಎಲ್ಲರೂ ಒಟ್ಟಾಗಿ ಸಂತಸ ಹಂಚಿಕೊಂಡು ಸಹಭೋಜನ ಸ್ವೀಕರಿಸಿದರು.