ಸ್ವಾತಂತ್ರ್ಯ ದಿನಾಚರಣೆ ದಿನವಾದ ಆಗಸ್ಟ್ 15ರಂದು ಅಪರಾಹ್ನ 3 ಘಂಟೆಗೆ ಸುಳ್ಯ ನಗರದಲ್ಲಿ ಸುಳ್ಯ ನಗರದ ಮತ್ತು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಯಶಸ್ವಿಗಾಗಿ ಆ.೧೩ರಂದು ಸುಳ್ಯ ನಗರದ ಬೀರಮಂಗಲ,ಜಯನಗರ ವಾರ್ಡ್ ಗಳಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯನ್ನು ನಡೆಸಲಾಯಿತು.
ಬೀರಮಂಗಲದ ನಿರೀಕ್ಷಣಾ ಮಂದಿರದಲ್ಲಿ ಸ್ಥಳೀಯ ಮುಖಂಡರಾದ ಡೇವಿಡ್ ಧೀರಾ ಕ್ರಾಸ್ತಾ, ನೀಲಾಧರ, ಬೆಳ್ಳಿಯಪ್ಪ ಗೌಡ,ಅಜಿತ್ ಬಿ.ಟಿ.,ಮಹೇಶ್ ಬೀರಮಂಗಲ ಹಾಗೂ ಗುರುಸ್ವಾಮಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಜಯನಗರ ವಾರ್ಡ್ ನಲ್ಲಿ ಸ್ಥಳೀಯ ಮುಖಂಡರಾದ ಪ್ರವೀಣ್ ಕುಮಾರ್ ಎ. ಎಮ್.,ಸುಂದರ ಕುದ್ಪಾಜೆ , ಅಬ್ದುಲ್ಲಾ ಹಾಜಿ ಜಯನಗರ,ಉಸ್ಮಾನ್ ಪೈಂಟ್, ಮಹಮ್ಮದ್ ಮುಟ್ಟತ್ತೋಡಿ, ರಮೇಶ್ ಆಟೋ, ನವೀನ್ ಮಚಾದೋ ಮತ್ತು ಮೊಹಮ್ಮದ್ ಆಟೋ, ಮುದ್ದಪ್ಪ, ಶಫೀಕ್ ಆಟೋ ಹಾಗೂ ವಿಕ್ರಮ ಯುವಕ ಮಂಡಲ ಜಯನಗರದ ಸದಸ್ಯರು ಭಾಗವಹಿಸಿದ್ದರು.
ಗಾಂಧಿ ಚಿಂತನಾ ವೇದಿಕೆಯ ಸಂಚಾಲಕ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ವಾರ್ಡ್ ನಿಂದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಊರಿನ ಎಲ್ಲಾ ಪುರುಷರು ಹಾಗೂ ಮಹಿಳೆಯರು ಜಾತಿ,ಬೇಧ ಮರೆತು ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ರಾಷ್ಟ್ರ ಧ್ವಜವನ್ನು ಮತ್ತು ತಮ್ಮ ತಮ್ಮ ಸಂಘ ಸಂಸ್ಥೆಗಳ ಬ್ಯಾನರ್ ಗಳನ್ನು ತರುವಂತೆ ವಿನಂತಿಸಿಕೊಂಡರು. ಈ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರುಗಳು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವ ಭರವಸೆಯನ್ನು ನೀಡಿದರು.
ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.