ಹಳೆಗೇಟು : ಮೆಕಾನಿಕ್ ಸತ್ಯರವರ ಪಾರ್ಥಿವ ಶರೀರದ ಅಂತಿಮ ದರ್ಶನ

0

ಲಕ್ಷ್ಮಿ ಆಟೋ ಮೆಕಾನಿಕ್ ಸಂಸ್ಥೆ ಮುಂಭಾಗ ಅಂತಿಮ ದರ್ಶನ ಪಡೆದ ನೂರಾರು ಸಾರ್ವಜನಿಕರು

ಸುಳ್ಯ ಹಳೆಗೇಟು ಲಕ್ಷ್ಮಿ ಆಟೋ ಇಲೆಕ್ಟ್ರಿಕಲ್ ವರ್ಕ್ಸ್ ಮಾಲಕ ಸತ್ಯ ನಾರಾಯಣ ರವರ ಅಕಾಲಿಕವಾಗಿ ನಿಧನರಾಗಿದ್ದು ಆ 14 ರಂದು ಸಂಜೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಧರ್ಭದಲ್ಲಿ ಸುಳ್ಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು, ನೂರಾರು ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಸುಳ್ಯದ ಎಲ್ಲಾ ಗ್ಯಾರೇಜ್ ಮಾಲಕರು ಸಂಜೆ ವೇಳೆ ತಮ್ಮ ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.