77 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಸಿಟಿ ಮತ್ತು ಯುವಜನ ಸಂಯುಕ್ತ ಮಂಡಳಿ ಸುಳ್ಯ ವತಿಯಿಂದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ದೇಶಭಕ್ತಿ ಮತ್ತು ಸ್ವಾತಂತ್ರ್ಯ ಬಗ್ಗೆ ಭಾಷಣ ಸ್ಪರ್ಧೆಯನ್ನು ಆ. 14 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಆಯೋಜಿಸಲಾಯಿತು. ನಿವೃತ್ತ ಯೋಧ ಬಾಲಕೃಷ್ಣ ಎಂ.ಎನ್ ರವರು ಉದ್ಘಾಟಿಸಿದರು. ಯುವಜನ ಸಂಯುಕ್ತ ಮಂಡಳಿ ಅದ್ಯಕ್ಷ ಪ್ರವೀಣ್ ಕುಮಾರ್ ಎ.ಎಂ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ರೋಟರಿ ವಲಯ 5 ರ ವಲಯ ಸೇನಾನಿ ರೊ.ಮುರಳೀಧರ್ ರೈ ವೇದಿಕೆಯಲ್ಲಿದ್ದರು.
ರೋಟರಿ ಕ್ಲಬ್ ಸುಳ್ಯ ಸಿಟಿಯ ಅದ್ಯಕ್ಷ ಶಿವಪ್ರಸಾದ್ ಕೆ.ವಿ ಸ್ವಾಗತಿಸಿದರು, ಗುರುರಾಜ್ ಅಜ್ಜಾವರ ವಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತರಾದ ಯೋಧ ಬಾಲಕೃಷ್ಣ ಎ.ಎಂ ಅವರನ್ನು ಸನ್ಮಾನಿಸಲಾಯಿತು.