ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

0

ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸುಳ್ಯ 78ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಶಾಲಾ ಕಾರ್ಯದರ್ಶಿಗಳಾದ ಲತೀಫ್ ಹರ್ಲಡ್ಕ ನೆರೆವೇರಿಸಿದರು.


ನಗರ ಪಂಚಾಯತ್ ಸದಸ್ಯರು ಹಾಗೂ ಶಾಲೆಯ ನಿರ್ದೇಶಕರಾದ ಉಮ್ಮರ್ ಕೆ ಎಸ್ ರವರು ಸಂದೇಶ ಭಾಷಣವನ್ನು ಮಾಡಿದರು.


ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಕಟ್ಟೆಕಾರ್, ಮೀಫ್ ಉಪಾಧ್ಯಕ್ಷರು ಹಾಗೂ ಶಾಲೆಯ ನಿರ್ದೇಶಕರಾದ ಹಾಜಿ ಕೆ ಎಂ ಮುಸ್ತಫಾ, ಶಾಲಾ ಮಾಜಿ ಸಂಚಾಲಕ ಹಾಜಿ ಮುಹಿಯುದ್ದೀನ್ ಫ್ಯಾನ್ಸಿ,ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಶಾಫಿ ಕುತ್ತಮೊಟ್ಟೆ , ಉಬೇದುಲ್ಲಾ, ಶಾಲಿ ಕಟ್ಟೆಕ್ಕಾರ್ ,ಅಬ್ದುಲ್ ಹಮೀದ್ ಬೀಜಕೊಚ್ಚಿ,ಎಸ್ ಪೀ ಅಬೂಬಕರ್,ಸಿದ್ದೀಕ್ ಕಟ್ಟೆಕ್ಕಾರ್, ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಇಲ್ಯಾಸ್ ಮಾಸ್ಟರ್ ನೇರವೇರಿಸಿದರು, ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಗ್ರೀನ್ ವ್ಯೂ ಶಾಲಾ ಆಡಳಿತ ಮಂಡಳಿ ಸದಸ್ಯರು ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕರಾದ ರಂಜಿತ್, ಮಂಜುನಾಥ್ ನೆರವೇರಿಸಿದರು ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಸಹ ಶಿಕ್ಷಕಿ ಅಶ್ವಿನಿ ನೇರವೇರಿಸಿದರು