ಪಂಜ ಲಯನ್ಸ್ ಕ್ಲಬ್ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಪಂಜ ಲಯನ್ಸ್ ಕ್ಲಬ್ ವತಿಯಿಂದ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯು ಆ.15 ರಂದು ನಡೆಯಿತು. ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಶಿಧರ ಪಳಂಗಾಯ ಸಭಾಧ್ಯಕ್ಷತೆ ವಹಿಸಿ, ದ್ವಜಾರೋಹಣ ಗೈದರು.

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಿವೃತ್ತ ಪ್ರಾಂಶುಪಾಲ ಪ್ರಧಾನ ಭಾಷಣ ಮಾಡಿ
” ದೇಶಕ್ಕೆ ಕೊಡುಗೆ ನೀಡುವ ವೃತ್ತಿ ನಿಮ್ಮದಾಗಿರಬೇಕು. ಮುಂದುವರಿಯುತ್ತಿರುವ ಭಾರತದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಿ” ಎಂದು ಹೇಳಿದರು.

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಕಾರ ಪ್ರಾಂಶುಪಾಲೆ ಶ್ರೀಮತಿ ರೂಪಲತಾ ಕೆ ಆರ್, , ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ
ಲೀಲಾ ಮಾಧವ ಜಾಕೆ, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ನಡ್ಕ,
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರುಣಾಕರ ಎಣ್ಣಿಮಜಲು ವೇದಿಕೆಗೆ ಆಹ್ವಾನಿಸಿದರು.
ದಿಲೀಪ್ ಬಾಬ್ಲುಬೆಟ್ಟು ಧ್ವಜವಂದನೆ ಮಾಡಿದರು. ನಾಗೇಶ್ ಕಿನ್ನಿಕುಮೇರಿ ಲಯನ್ಸ್ ಪ್ರಾರ್ಥನೆ ಮಾಡಿದರು.
ಪ್ರಾಂಶುಪಾಲೆ ಶ್ರೀಮತಿ ರೂಪಲತಾ ಕೆ ಆರ್ ಸ್ವಾಗತಿಸಿದರು. ವಾಸುದೇವ ಮೇಲ್ಪಾಡಿ ಅತಿಥಿಯನ್ನು ಪರಿಚಯಿಸಿದರು.
ಮೋಹನ್ ದಾಸ್ ಕೂಟಾಜೆ ವಂದಿಸಿದರು.

ಬಳಿಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.