ಎಲಿಮಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ಎಲಿಮಲೆ ಇದರ ಆಶ್ರಯದಲ್ಲಿ ಎಲಿಮಲೆ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಜರಗಿತು .


ಸೆಯ್ಯಿದ್ ಮುಹ್ಸಿನ್ ಕುಂಜಿಲಂ ತಂಙಳ್ ರವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ವೀರರನ್ನು ಸ್ಮರಿಸಿ, ಅವರಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ಸ್ಥಳೀಯ ಮುದರ್ರಿಸ್ ಅನಸ್ ಅಝ್ಹರಿ ಪೊಯ್ಯತಬಯಲ್ ರವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಭಾರತದ ಸ್ಥಿತಿಗತಿಗಳು ಹಾಗೂ ಸ್ವಾತಂತ್ರ್ಯದ ಹೋರಾಟಗಳ ಬಗ್ಗೆ ವಿವರಿಸಿದರು. ರಾಷ್ಟ್ರ ಧ್ವಜಕ್ಕೆ ಗೌರವ ವಂದನೆಯನ್ನು ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡಿದರು. ದರ್ಸ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.


ಕಾರ್ಯಕ್ರಮದಲ್ಲಿ ಎಲಿಮಲೆ ಸದರ್ ಉಸ್ತಾದ್ ಫೈಝಲ್ ಸಖಾಫಿ, ಮೆತ್ತಡ್ಕ ಸದರ್ ಫವಾಝ್ ಹಿಮಮಿ, ಮುಸ್ತಫ ಹಿಶಾಮಿ ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಕಿ, ಜೀರ್ಮುಕಿ ಮಸೀದಿ ಅಧ್ಯಕ್ಷ ಜಿ. ಎಸ್. ಅಬ್ದುಲ್ಲ ನುಸ್ರತ್, ಉಪಾಧ್ಯಕ್ಷರಾದ ಹೈದರ್ ಹಾಜಿ ಅಬ್ದುಲ್ ಖಾದರ್, ಕೋಶಾಧಿಕಾರಿ ಬಾತಿಶ, ಕಾರ್ಯದರ್ಶಿ ಅಶ್ರಫ್ ದಿನಸಿ ಬಜಾರ್, ನಾಸಿರ್ ದೊಡ್ಡಂಗಡಿ ಹಾಗೂ ಸಮಿತಿ ಸದಸ್ಯರು ಮತ್ತು ಇಕ್ರಾಮುಸ್ಸುನ್ನ ಹಯಾತುಲ್ ಇಸ್ಲಾಂ ದರ್ಸ್ ವಿದ್ಯಾರ್ಥಿಗಳು ಹಾಗೂ
ನೂರುಲ್ ಹುದಾ ಮದ್ರಸದ ವಿದ್ಯಾರ್ಥಿಗಳೂ ಸೇರಿದಂತೆ ಜಮಾಅತಿಗೊಳಪಟ್ಟ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನುಸ್ರತ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು .