ಮಳೆಯ ನಡುವೆಯೂ ಯಶಸ್ವಿಯಾಗಿ ನಡೆದ ಪಂಜಿನ ಮೆರವಣಿಗೆ
ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗಾ ವಾಹಿನಿ ಅಯೋಧ್ಯೆ ಶಾಖೆ ಎಲಿಮಲೆ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಬ್ರಹತ್ ಪಂಜಿನ ಮೆರವಣಿಗೆಯು ಆ.13ರಂದು ಎಲಿಮಲೆ ಯಲ್ಲಿ ನಡೆಯಿತು.
ಹಿರಿಯ ಸ್ವಯಂ ಸೇವಕರಾದ ಧರ್ಮಪಾಲ ಗಟ್ಟಿಗಾರು ಮೆರವಣಿಗೆಗೆ ಚಾಲನೆ ನೀಡಿದರು. ಪಂಜಿನ ಮೆರವಣಿಗೆಯ ನಂತರ ಸಭಾ ಕಾರ್ಯಕ್ರಮ ನಡೆಯಿತು.









ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್ ಅಯೋಧ್ಯೆ ಶಾಖೆ ಎಲಿಮಲೆ ಅಧ್ಯಕ್ಷರಾದ ಬೊಜ್ಜಪ್ಪ ಗೌಡ ಹರ್ಲಡ್ಕ ವಹಿಸಿದ್ದರು. ಬಜರಂಗದಳದ ಜಿಲ್ಲಾ ಸಂಯೋಜಕರದ ಭರತ್ ಕುಮ್ಡಲ್ ದಿಕ್ಸೂಚಿ ಭಾಷಣ ಮಾಡಿದರು . ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ಸಂಘ ಚಾಲಕರಾದ ಚಂದ್ರ ಶೇಖರ್ ಭಟ್ ತಳೂರು, ಬಜರಂಗ ದಳ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ವಿಶ್ವ ಹಿಂದೂ ಪರಿಷದ್ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗ ದಳ ತಾಲೂಕು ಸಂಯೋಜಕ ಹರಿಪ್ರಸಾದ್ ಬಿ. ವಿ., ಪ್ರಖಂಡ ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲ್ತಡ್ಕ, ಧರ್ಮಪಾಲ ಗಟ್ಟಿಗಾರು, ಘಟಕ ಕಾರ್ಯದರ್ಶಿ ಸುನಿಲ್ ಸುಳ್ಳಿ, ಸಂಯೋಜಕ ಪ್ರಶಾಂತ್ ಅಂಬೆಕಲ್ಲು, ಮಾತೃ ಶಕ್ತಿ ಸಂಯೋಜಕಿ ಶಶಿಕಲಾ ಕಾಡುಜಬಲೆ, ದುರ್ಗವಾಹಿನಿ ಪ್ರಮುಕ್ ಜಯಂತಿ ಎಲಿಮಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ರಾದ ಎ. ವಿ. ತೀರ್ಥರಾಮ, ಕಾರ್ಯದರ್ಶಿ ಪ್ರಕಾಶ್ ಯಾದವ್, ವಿಶ್ವ ಹಿಂದೂ ಪರಿಷತ್ ಬಜರಗದಳ ಮಾತೃ ಶಕ್ತಿ ದುರ್ಗಾ ವಾಹಿನಿ ಅಯೋಧ್ಯೆ ಘಟಕದ ಎಲ್ಲಾ ಪದಾಧಿಕಾರಿಗಳು, ಮಾತೆಯರು, ಹಿಂದೂ ಕಾರ್ಯಕರ್ತರು ನೂರಾರು ಹಿಂದೂ ಬಾಂಧವರು ಸೇರಿದ್ದರು.
ತಾರಾನಾಥ ಅಡಿಗೈ ಸ್ವಾಗತಿಸಿ. ಕಿರಣ್ ಗುಡ್ಡೆ ಮನೆ ವಂದಿಸಿದರು. ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು.









