ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 16 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

0

ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.16 ರಂದು
ಹದಿನಾರನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.

ನೂರಾರು ಸಂಖ್ಯೆಯ ಸೇವಾರ್ಥಿಗಳು ಈ ಸೇವೆಯಲ್ಲಿ ಪಾಲ್ಗೊಂಡರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಿದ್ದಿಧಾತ್ರಿ ಸಭಾಭವನದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು
ಶ್ರೀ ದುರ್ಗಾಪರಮೇಶ್ವರಿ ಉಪಾಸನ ಸಮಿತಿಯ ವತಿಯಿಂದ ನಡೆದಿದ್ದು ಕಾರ್ಯಕ್ರಮದ ಯಶಸ್ವಿಗೆ ಪದಾಧಿಕಾರಿಗಳಾದ ವಾರಿಜಾಕ್ಷಿ ಕೊಚ್ಚಿ, ರವಿಕಲಾ ಚೆಮ್ನೂರು, ಚಂದ್ರಕಲಾ ಉತ್ರಂಬೆ, ಚಂದ್ರಾವತಿ ಉತ್ರಂಬೆ, ಪಲ್ಲವಿ ಕೊಚ್ಚಿ ಆದಿಯಾಗಿ ಸಮಿತಿಯ ಸದಸ್ಯರು, ದೇವಸ್ಥಾನದ ಅಭಿವೃದ್ಧಿ ಸಮಿತಿಯವರು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು, ಇತರೇ ಉಪ ಸಮಿತಿಯ ಸದಸ್ಯರುಗಳು ದುಡಿದರು.