ರಾಜ್ಯಪಾಲರುಗಳ ಹೆಗಲಲ್ಲಿ ಗನ್ ಇಟ್ಟು ಪ್ರಜಾಪ್ರಭುತ್ವದ ಹಣೆಗೆ ಗುಂಡು ಹೊಡೆಯುತ್ತಿರುವ ಕೇಂದ್ರ ಬಿಜೆಪಿ ಸರಕಾರ

0

ರಾಜ್ಯಪಾಲರುಗಳು ಪ್ರಜಾಪ್ರಭುತ್ವದ ಸಂರಕ್ಷನ ಸ್ಥಾನವನ್ನು ವಹಿಸಿಕೊಂಡಿರುವವರು . ಅಂತಹವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿಯಾಗುವಂತೆ ವರ್ತಿಸುವುದು ಅತ್ಯಂತ ಅಪಾಯಕಾರಿ ಮತ್ತು ಆತಂಕಕಾರಿ ನಡೆಯಾಗಿದೆ ಎಂದು ಕೆ. ಪಿ.ಸಿ.ಸಿ.ಪ್ರಚಾರ ಸಮಿತಿ ಸಂಯೋಜಕ ಜಾನಿ.ಕೆ.ಪಿ ತಿಳಿಸಿದ್ದಾರೆ.

ವಶೀಕರಣಕ್ಕೊಳಪಟ್ಟ ಒಬ್ಬ ಸಾಮಾನ್ಯ ವ್ಯಕ್ತಿಯು ಕೊಟ್ಟ ದೂರಿನ ಆಧಾರದಲ್ಲಿ, ಸಂವಿಧಾನದ ಆಶಯದಂತೆ ಆಯ್ಕೆಯಾದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನಿಗೆ ಅನುಮತಿ ಕೊಡಬೇಕು ಎಂದು ಕೇಳಿದ್ದೇ ತಡ, ಪೂರ್ವತಯಾರಿ ಸ್ಕ್ರಿಪ್ಟ್ ರೀತಿಯಲ್ಲಿ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಕುತಂತ್ರದ ಸಂಚಿನ ರೀತಿಯಲ್ಲಿ ಸಿ.ಎಂ ಸಿದ್ದರಾಮಯ್ಯರ ವಿರುದ್ದ ಪ್ರಾಸಿಕ್ಯೂಷನಿಗೆ ಅನುಮತಿ ಕೊಡಲಾಯಿತು. ಇದು ಅತ್ಯಂತ ಖಂಡನೀಯ ನಡೆ.

ಅಕ್ರಮವೆಂದು ಹೇಳುತ್ತಿರುವ ಈ ಸೈಟನ್ನು ಸಿದ್ದರಾಮಯ್ಯ ಅವರ ಮಡದಿಗೆ ಕೊಟ್ಟದ್ದೇ ಅಂದಿನ ಬಿಜೆಪಿ ಸರಕಾರ . ಅದರ ಹೆಸರಿನಲ್ಲಿ ಪ್ರಾಸಿಕ್ಯೂಷನಿಗೆ ಅನುಮತಿ ಕೊಡಬೇಕೆಂದರೆ ಅಂದಿನ ಬಿಜೆಪಿ ಮುಖ್ಯಮಂತ್ರಿಯವರನ್ನೇ ಹೊಣೆಮಾಡಬೇಕೆನ್ನುವುದು ಸಾಮಾನ್ಯ ಜ್ಞಾನ. ಆದ್ದರಿಂದ ರಾಜ್ಯಪಾಲರ ನಡೆ ಮೇಲ್ನೋಟಕ್ಕೆ ವಿಲಕ್ಷಣವಾಗಿ ಕಾಣುತ್ತಿದೆ. ಕರ್ನಾಟಕದ ಜನತೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡಲಿದ್ದಾರೆ ಎಂದು ಜಾನಿ.ಕೆ.ಪಿಯವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.