ಆಯಿಷತ್ ತೌಶೀರ ಜಿ.ಎಲ್ ಪದವಿ ವಾಣಿಜ್ಯ ವಿಭಾಗದಲ್ಲಿ 553 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ

0

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಸುಳ್ಯಗ್ರಾಮ ( ಎಂ ಕೆ ಗ್ರೂಪ್ಸ್ )ನ ಅಬ್ದುಲ್ ಲತೀಫ್ ಎಂ ಕೆ ಮತ್ತು ತಾಹಿರಾ ದಂಪತಿಗಳ ಪುತ್ರಿ ಹಾಗು ನ ಪಂ ಸದಸ್ಯ ಶರೀಫ್ ಕಂಠಿ ಯವರ ಅಣ್ಣನ ಮಗಳು ಆಯಿಷತ್ ತೌಶೀರ ಜಿ.ಎಲ್ 553 ಅಂಕಗಳೊಂದಿಗೆ (85.07%)
ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ರೋಟರೀ ಶಾಲೆ ಸುಳ್ಯ, ಪ್ರೌಢ ಶಿಕ್ಷಣವನ್ನು ಸೈಂಟ್ ಜೋಸೆಫ್ ಪದವಿ ಪೂರ್ವ ವಿದ್ಯಾಲಯ ಸುಳ್ಯ ,
ಪದವಿ ಶಿಕ್ಷಣವನ್ನು ನೆಹರು ಸ್ಮಾರಕ ಕಾಲೇಜು ಸುಳ್ಯದಲ್ಲಿ ಪಡೆದಿರುತ್ತಾರೆ.