ಇಂದು “ಮರೆಯಾಗುತ್ತಿರುವ ಹರಿಕಥಾ ಸತ್ಸಂಗ” ವಿಷಯದ ಬಗ್ಗೆ ಶ್ರೀಗಳವರಿಂದ ಪ್ರವಚನ
ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನ ಶ್ರೀಗಳು ಚಾತುರ್ಮಾಸ್ಯ ಜು.27 ರಿಂದ ವ್ರತದಲ್ಲಿದ್ದು ಆ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ
ಆ.18 ರಂದು ಶ್ರೀಗಳು ದೀಪೋಜ್ವಲನ ನಡೆಸಿ ಚಾಲನೆ ನೀಡಿದರು.
ಈ ವೇಳೆ
ಸ್ಥಳೀಯ ಕಲಾವಿದರಿಂದ,
ಶ್ರೀ ಮಠದ ವೈದಿಕರಿಂದ ವೇದ ಘೋಷಣೆ ನಡೆಯಿತು.
ಬಳಿಕ – ಶ್ರೀಗಳಿಂದ
“ಚಾತುರ್ಮಾಸ್ಯ” ವಿಷಯದ ವ್ರತದ ನಿಯಮ ಹಾಗೂ ವ್ರತದ ಕಟ್ಟುನಿಟ್ಟಿನ ಆಹಾರ ಪದ್ಧತಿ ಮತ್ತು ಅದರ ವೈಜ್ಞಾನಿಕ ಹಿನ್ನೆಲೆ
ಬಗ್ಗೆ ಪ್ರವಚನ ನಡೆಯಿತು.
ಬಳಿಕ ಶ್ರೀಮತಿ ಶ್ರೇಯಾ ಕೊಳತ್ತಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ ನಡೆಯಿತು.
ಆ. 19 ರಂದು ಸಾಯಂಕಾಲ ವಿದ್ಯಾಪ್ರಸನ್ನ ಶ್ರೀಗಳವರಿಂದ ಭಾಗವತ ಪ್ರವಚನ ನಡೆದು. ಬಳಿಕ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಇವರಿಂದ
“ಗಮಕ ವಾಚನ “
ನಡೆಯಿತು.
ಆ.20 ರ ಸಂಜೆ ಗಂಟೆ 5-00 ರಿಂದ “ಮರೆಯಾಗುತ್ತಿರುವ ಹರಿಕಥಾ ಸತ್ಸಂಗ” ಎಂಬ ವಿಷಯದ ಬಗ್ಗೆ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಬಳಿಕ ಖ್ಯಾತ ಕೀರ್ತನೆಕಾರರು ಡಾ|ಎಸ್ .ಪಿ .ಗುರುದಾಸ, ಮಂಗಳೂರು ಇವರಿಂದ ಹರಿಕಥಾ ಸತ್ಸಂಗ- ಶ್ರೀ ರಾಮಗುಣಧಾಮ
ನಡೆಯಲಿದೆ.