ಸುಳ್ಯ, ಅರಂತೋಡು, ಸಂಪಾಜೆ ಭಾಗದಲ್ಲಿ ಕೊಕ್ಕೊ ಖರೀದಿ ಕೇಂದ್ರ ಆರಂಭಕ್ಕೆ ನಿರ್ಣಯ
ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಕೃಷಿ ಇಲಾಖೆ, ತೋಟಗಾರಿಕೆ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಆರಂಭಗೊಂಡಿರುವ ಸುಳ್ಯ ರೈತ ಉತ್ಪಾದಕ ಕಂಪೆನಿಯ 3 ನೇ ವಾರ್ಷಿಕ ಮಹಾಸಭೆಯು ಆ.19ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಸ್ಥೆಯ ಸದಸ್ಯರಿಗೆ ಸಂಸ್ಥೆಯಿಂದ ಖರೀದಿಗೆ ರೂ.200ರ ಡಿಸ್ಕೌಂಟ್ ಕೂಪನ್ ನೀಡುವುದೆಂದು ಅಧ್ಯಕ್ಷರು ತಿಳಿಸಿದರು.
ಕೃಷಿ ಇಲಾಖೆಯ ಜಂಟೀಕೃಷಿ ನಿರ್ದೇಶಕ ಕೆಂಪೇಗೌಡ ಹೆಚ್. ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುಹಾನ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಎ.ಐ.ಸಿ. ನಿಟ್ಟೆ ಸಂಯೋಜಕಿ ದೀಕ್ಷಾ ರೈ ಮುಖ್ಯ ಅತಿಥಿಗಳಾಗಿದ್ದರು.
ಸನ್ಮಾನ : ವರದಿ ಸಾಲಿನಲ್ಲಿ ರೈತ ಉತ್ಪಾದಕ ಕಂಪೆನಿಯೊಂದಿಗೆ ಅತ್ಯುತ್ತಮ ವ್ಯವಹಾರ ನಡೆಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಳ್ಯ, ನರಹರಿ ಭಟ್ ಮಠತ್ತಡ್ಕ ಬೆಳ್ಳಾರೆ, ಕುಶಾಲಪ್ಪ ಗೌಡ ಬೆಳ್ಳಾರೆ, ದೇವಪ್ಪ ನಾಯಕ್ ಮರ್ಕಂಜ, ಎಸ್ ಪಿ ಮುರಳೀಧರ ಬೆಳ್ಳಾರೆ, ಮಂಜುನಾಥ ರೈ ಮರ್ಕಂಜ, ರಾಮಕೃಷ್ಣ ಬೆಳ್ಳಾರೆ ( ನಿರ್ದೇಶಕರು ಸುಳ್ಯ ರೈತ ಉತ್ಪಾದಕ ಕಂಪನಿ)ಯವರನ್ನು ಸನ್ಮಾನಿಸಲಾಯಿತು.
ನೂತನ ನಿರ್ದೇಶಕರಾಗಿ
ಧರ್ಮಪಾಲ ಎಲ್ ಐವರ್ನಾಡು, ಗೋವಿಂದ ಎ ಮರ್ಕಂಜ ಕಂಪೆನಿಗೆ ಆಯ್ಕೆ ಮಾಡಲಾಯಿತು.
ವಾರ್ಷಿಕ ವರದಿಯನ್ನು ನಿರ್ದೇಶಕ ಲೋಹಿತ್ ಕೊಡಿಯಾಲ ಮಂಡಿಸಿದರು.
ಲೆಕ್ಕಪತ್ರವನ್ನು ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಕೊಡಿಯಾಲ ಮಂಡಿಸಿದರು.
ಜೈನ್ ಇರಿಗಷೆನ್ ಇವರಿಂದ ಹನಿ ನೀರಾವರಿ ಕುರಿತು ಪ್ರಾತ್ಯಕ್ಷತೆ ನಡೆಯಿತು. ವಿವಿಧ ಹಣ್ಣಿನ ಗಿಡಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಸುಳ್ಯದಲ್ಲಿ ಒಂದು ಸೇಲ್ಸ್ ಔಟ್ ಲೆಟ್ ತೆರೆಯುವುದು. ಸುಳ್ಯ ಮತ್ತು ಅರಂತೋಡು ಅಥವಾ ಸಂಪಾಜೆ ಭಾಗದಲ್ಲಿ ಕೊಕ್ಕೊ ಖರೀದಿ ಕೇಂದ್ರ ಆರಂಭಿಸಲು ನಿರ್ಣಯ ಮಾಡಲಾಯಿತು.
ನಿರ್ದೇಶಕರಾದ ಜಯರಾಮ ಎಂ, ಭಾಸ್ಕರ್ ನಾಯರ್ , ದೇವರಾಜ್ ಆಳ್ವ, ಎಂ ಡಿ ವಿಜಯ ಕುಮಾರ್ ಮಡ್ಡಪ್ಪಾಡಿ, ಶ್ರೀಶಕುಮಾರ್ ಎಂ ಎಸ್, ಸತ್ಯಪ್ರಸಾದ್ ಪುಳಿಮಾರಡ್ಕ, ರಾಮಕೃಷ್ಣ ಬೆಳ್ಳಾರೆ, ನೇತ್ರಕುಮಾರ್ ಕನಕಮಜಲು, ಧರ್ಮಪಾಲ ಎಲ್ ಐವರ್ನಾಡು, ಸುರೇಶ್ ರೈ ಬಾಳಿಲ, ಗೋವಿಂದ ಎ ಮರ್ಕಂಜ ಮೊದಲಾದವರು ಇದ್ದರು.
ನಿರ್ದೇಶಕ ಎಂ.ಡಿ. ವಿಜಯಕುಮಾರ್ ಸ್ವಾಗತಿಸಿದರು. ನಿರ್ದೇಶಕಿ ಶ್ರೀಮತಿ ಮಧುರಾ ಎಂ ಆರ್ ಮಂಡೆಕೋಲು ಕಾರ್ಯಕ್ರಮ ನಿರೂಪಿಸಿದರು.