ಆದಿದ್ರಾವಿಡ ಯುವ ವೇದಿಕೆ ದ. ಕ ಜಿಲ್ಲೆ ಇದರ ಜಿಲ್ಲಾ ಸಮಿತಿಯ ಪಧಾಧಿಕಾರಿಗಳ ಆಯ್ಕೆ ಹಾಗೂ ಮಹಾಸಭೆ ಇಂದು ಕೆವಿಜಿ ಪುರಭವನದಲ್ಲಿ ನಡೆಯಿತು. ಆದಿದ್ರಾವಿಡ ಸಮುದಾಯದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಂಘಟನೆಯನ್ನು ಬಲಪಡಿಸುವ ವಿಚಾರವಾಗಿ, ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಶೈಕ್ಷಣಿಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು, ಹಾಗೂ ಮುಂದಿನ ಎರಡು ವರ್ಷಗಳ ಅವಧಿಗೆ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಸುಂದರ ಅಡ್ಪಂಗಾಯ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೂ ಉಪಧ್ಯಕ್ಷರಾಗಿ ಅಶ್ವಿನ್ ಅಜ್ಜಾವರ, ಕಾರ್ಯದರ್ಶಿಯಾಗಿ ಸತೀಶ್ ಬಿಳಿಯಾರು, ಜೊತೆ ಕಾಯ೯ದಶಿ೯ಯಾಗಿ ನಿತಿನ್ ಬಯಂಬು, ಕೋಶಾಧಿಕಾರಿಯಾಗಿ ಗೋಪಾಲ ಸರಳಿಕುಂಜ ಜೊತೆ ಕೋಶಾಧಿಕಾರಿಯಾಗಿ ಸತೀಶ್ ಪಂಜಿಗುಂಡಿ, ಕ್ರೀಡಾಕಾರ್ಯದರ್ಶಿ, ರಮೇಶ್ ಕಲ್ಲುಗುಂಡಿ ಜೊತೆ ಕ್ರೀಡಾ ಕಾಯ೯ದಶಿ೯ಯಾಗಿ ಕೇಶವ ಕಲ್ಪಡ, ಮಹೇಶ್ ನೆಹರುನಗರ
ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಗಣೇಶ್ ಮಠತ್ತಡ್ಕ, ಜೊತೆ ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ನವೀನ್ ನೆಹರುನಗರ ,ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಬೂಡು ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಲಕ್ಮಣ್ ನಾವೂರು, ಮಹಿಳಾ ಸಂಘಟಕ ರಾಗಿ ಕಮಾರಿ ಅಶ್ವಿನಿ ಪಂಜಿಗುಂಡಿ, ಕುಮಾರಿ ಹೇಮಲತಾ ಪಂಜಿಗುಂಡಿ,
ಕಾನೂನು ಸಲಹೆಗಾರ ರಾಗಿ ಪ್ರಕಾಶ್ ಬೂಡು ಇವರನ್ನು ಆಯ್ಕೆ ಮಾಡಲಾಯಿತು.. ಹಾಗೂ ಜಿಲ್ಲಾ ಸದಸ್ಯರಾಗಿ ಜನಾಧ೯ನ ನನ್ಯಡ್ಕ, ವಸಂತ ಬುಳ್ಳೇರಿಕಟ್ಟೆ, ಜಗನ್ನಾಥ ಪುತ್ತೂರು, ರವಿ ಪಾಂಬಾರು, ರಕ್ಷಿತ್ ಮುಳ್ಯಕಜೆ, ರಾಜೇಶ್ ಮುಳ್ಯಕಜೆ, ಲೋಹೀತ್ ಮುಳ್ಯಕಜೆ, ಕುಮಾರ್ ಪಾನತ್ತಿಲ, ಹರೀಶ್ ಶೇಖಮಲೆ, ರಕ್ಷಿತ್ ಬಯಂಬು, ಸುರೇಶ್ ಬಯಂಬು, ರಾಘವ ಪಂಜಿಗುಂಡಿ ನಾಗೇಶ್ ನಾವೂರು, ರಮೇಶ್ ಕೈೂಲ, ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಶ್ರೀ ದಾಮೋದರ ಬೇಯ೯, ಶ್ರೀ ಸುಂದರ ಬೇಯ೯, ಶ್ರೀ ಚಂದ್ರಕಾಂತ್ ಮೂಡಾಯಿತೋಟ, ಶ್ರೀ ಆನಂದ್ ಬೆಳ್ಳಾರೆ, ಶ್ರೀ ಶೀನಪ್ಪ ಬಯಂಬು, ಜನಾಧ೯ನ ಉಬರಡ್ಕ ಪಿಜಿನ ಪಂಜಿಗುಂಡಿ , ರಮೇಶ್ ಅಡ್ಕಾರ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ರಮೇಶ್ ಬೂಡು ನೆರವೇರಿಸಿದರು. ಹಾಗೂ ಶಶಿಕಾಂತ್ ಮೂಲ್ಯಕಜೆ ಇವರು ವಂದಿಸಿದರು.