ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಮನ್ ಕಿ ಬಾತ್ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಕಾಮತ್ ವಿನೋಬನಗರ ಅವರ ಮನೆಯಲ್ಲಿ ತೆಂಗಿನ ಸಸಿ ನೆಡುವುದರ ಮೂಲಕ ಜ.19ರಂದು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಗೊಂಡು ಪ್ರಸ್ತುತ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಧಾಕರ ಕಾಮತ್ ವಿನೋಬನಗರ ಹಾಗೂ ನಿರ್ದೇಶಕರಾಗಿ ಚುನಾಯಿತರಾದ ಡಾ.ಗೋಪಾಲಕೃಷ್ಣ ಭಟ್ ಕಾಟೂರು ಅವರನ್ನು ಅಂಜನಾದ್ರಿ ವಿನೋಬನಗರ ಬೂತ್ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಬೂತ್ ಸಮಿತಿ ಅಧ್ಯಕ್ಷ ರವಿರಾಜ ಗಬ್ಬಲಡ್ಕರವರನ್ನು ಕನಕಮಜಲು ವ್ಯ.ಸೇ.ಸ.ಸಂಘದ ನೂತನ ಅಧ್ಯಕ್ಷರಾದ ಸುಧಾಕರ ಕಾಮತ್ರವರು ಶಾಲು ಹೊದೆಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬೂತ್ ಸಮಿತಿಯ ಅಧ್ಯಕ್ಷ ರವಿರಾಜ್ ಗಬಲಡ್ಕ, ಕಾರ್ಯದರ್ಶಿ ನವೀನ್ ಕುಮಾರ್ ಅಂಬಾಡಿಮೂಲೆ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲೀಲಾವತಿ ವಿನೋಬನಗರ, ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಗಣೇಶ ಅಂಬಾಡಿಮೂಲೆ, ಹಿರಿಯ ಕಾರ್ಯಕರ್ತ ಜಗನ್ನಾಥ ಬೇರ್ಪಡ್ಕ, ಬೂತ್ ಸಮಿತಿಯ ಪದಾಧಿಕಾರಿಗಳಾದ ವಿಜಯ್ ವಿ. ನಗರ್ ವೀಣಾಸುನಿಲ್, ಮಮತಾಮಣಿ ಭಾರತಿ ವಿಜಯಕುಮಾರ್ ವಿನೋಬನಗರ ಶೋಭಾ ಕಾಮತ್, ಶ್ರೀಮತಿ ಶುಭ ಸುಧಾಕರ ಕಾಮತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.