ಎಣ್ಮೂರು ಗ್ರಾಮ ದೈವ ಆರೆಂಬಿ ಸ್ಥಾನ ಚಾವಡಿಯಲ್ಲಿ ಜ, ೨೦ರಂದು ಶಿರಾಡಿ ರಾಜನ್ ದೈವ ಮತ್ತು ಉಪ ದೈವಗಳ ನೇಮೋತ್ಸವ ನಡೆಯಿತು. ಬೆಳಿಗ್ಗೆ ಕೈಕಾಣಿಕೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಬಳಿಕ ಲಘು ಉಪಹಾರ ನಡೆಯಿತು.
ಈ ಸಂದರ್ಭದಲ್ಲಿ ಎಣ್ಮೂರು ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಪದ್ಮಾ ಆರ್ ಶೆಟ್ಟಿ, ಅತುಲ್ ಶೆಟ್ಟಿ ದಂಪತಿಗಳು, ವರುಣ್ ಕುಮಾರ್ ಶೆಟ್ಟಿ ದಂಪತಿಗಳು, ನ್ಯಾಯವಾದಿ ರಾಧಾಕೃಷ್ಣ ರೈ ಕೆ., ರಘುನಾಥ ರೈ ಕೆ.ಎನ್., ಎನ್.ಜಿ. ಪ್ರಭಾಕರ ರೈ, ಪ್ರಶಾಂತ್ ಕುಮಾರ್ ಶೆಟ್ಟಿ ಬೀರಳ, ಎನ್.ಜಿ. ಲೋಕನಾಥ ರೈ, ನಾಗೇಶ್ ಆಳ್ವ ಕೆ., ಸುಧೀರ್ ಕುಮಾರ್ ಶೆಟ್ಟಿ ಕೆ., ಅನೂಪ್ ಕುಮಾರ್ ಆಳ್ವ ಕೆ., ಅನಿಲ್ ಆಳ್ವ ಕೆ., ಕೇಶವ ರೈ ಪಟ್ಟೆ, ಜಗನಾಥ ರೈ ಕುಲಾಯಿತೋಡಿ, ಎಡಮಂಗಲ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ, ನಿಂತಿಕಲ್ಲು ಐ ಟಿ ಐ ಸಂಸ್ಥೆಯ ಪದಾಧಿಕಾರಿಗಳು. ಆರೆಂಬಿ ಕೂಡುಕಟ್ಟು ಮತ್ತು ಊರ ಪರ ಊರಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸಿತರಿದ್ದು. ಪ್ರಸಾದ ಸ್ವೀಕರಿಸಿದರು. (ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)