ಕ್ರೀಡಾ ಭಾರತಿ ಕರ್ನಾಟಕ, ರಾಜ್ಯ ಕ್ರೀಡಾ ಸಮ್ಮೇಳನ ಇದರ ಸಹಯೋಗದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜ.19ರಂದು ನಡೆದ ರಾಜ್ಯ ಮಟ್ಟದ ಮುಕ್ತ ಲಗೋರಿ ಪಂದ್ಯಾಟದಲ್ಲಿ ಸುಳ್ಯ ಮಹಿಳಾ ತಂಡವು ಪ್ರಥಮ ಸ್ಥಾನವನ್ನು ಗಳಿಸಿದೆ. ತಂಡದಲ್ಲಿ ತಿಲಕ ನವೀನ್ ಪೈಚಾರ್, ಭವಿತಾ ಬೇರಿಕೆ, ಧನ್ಯ ಬಾಳಿಲ, ಕೀರ್ತಿ, ಮೋಕ್ಷ, ಅಕ್ಷತಾ ಏನೆಕಲ್ಲು, ವಿಜಯ ಏನೆಕಲ್ಲು, ಕವಿತಾ, ವೀಕ್ಷಾ ಭಾಗವಹಿಸಿದ್ದರು.