ಜ. 3ರಂದು ನಿಧನರಾದ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರ.ದ. ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಡಮಂಗಲ ಗ್ರಾಮದ ಹೇಮಳ ಪ್ರಕಾಶ್ ಚಂದ್ರ ಹೇಮಳರಿಗೆ ಶ್ರದ್ಧಾಂಜಲಿ ಸಭೆ ಜ. 20ರಂದು ಮೃತರ ಸ್ವಗೃಹ ಹೇಮಳದಲ್ಲಿ ನಡೆಯಿತು.
ಶಿಕ್ಷಕ ಜನಾರ್ಧನ ಎ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪತ್ನಿ ಶ್ರೀಮತಿ ಸ್ವಾತಿ, ಪುತ್ರಿ ಕು. ಗಹನ, ಸಹೋದರಿಯರಾದ ಶ್ರೀಮತಿ ವನಜಾಕ್ಷಿ ಚಿದಾನಂದ, ಶ್ರೀಮತಿ ಕುಸುಮಾಕ್ಷಿ ಡಾ. ಮನೋಹರ್ ಐವರ್ನಾಡು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.