ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಅಟೋರಿಕ್ಷಾ ಪಲ್ಟಿ – ಜಖಂ

0

ಚಾಲಕನ ನಿಯಂತ್ರಣ ತಪ್ಪಿದ ಅಟೋರಿಕ್ಷಾವೊಂದು ಸೇತುವೆಯಿಂದ ಕೆಳಕ್ಕೆ ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾಗಿ ಅಟೋರಿಕ್ಷಾ ಜಖಂಗೊಂಡ ಘಟನೆ ಪೆರಾಜೆ ಗ್ರಾಮದ ಕುಕ್ಕುಂಬಳ ಎಂಬಲ್ಲಿ ಆ.25ರಂದು ರಾತ್ರಿ ಸಂಭವಿಸಿದೆ.

ಪೆರಾಜೆಯ ಅಟೋರಿಕ್ಷಾ ಚಾಲಕರಾದ ವೇಣು ಎಂಬವರು ತಮ್ಮ ಮನೆ ಕಡೆಗೆ ಹೋಗುತ್ತಿದ್ದ ವೇಳೆ ಕುಕ್ಕುಂಬಳ ಸೇತುವೆ ಬಳಿ ರಿಕ್ಷಾ ನಿಯಂತ್ರಣ ತಪ್ಪಿ ಸೇತುವೆ ಕೆಳಭಾಗಕ್ಕೆ ಪಲ್ಟಿಯಾಗಿದ್ದು, ಚಾಲಕ ವೇಣು ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಅಟೋರಿಕ್ಷಾ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.