ಸಿಂಗಾಪುರ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಕೆ. ವಿ. ಜಿ. ಐ. ಪಿ. ಎಸ್ ನ ವಿದ್ಯಾರ್ಥಿ ವರ್ಷಿತ್ ಎಮ್ ಆಯ್ಕೆ : ಕೆವಿಜಿ ಐಪಿಎಸ್ ನಲ್ಲಿ ಅಭಿನಂದನೆ

0

ದಿನಾಂಕ 25 ಆಗಸ್ಟ್ ರಂದು ಮೈಸೂರಿನ ಕೊಡವ ಸಮಾಜದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿಟೋರಿಯೋ ಕರಾಟೆ ಸ್ಪರ್ಧೆಯ ಕುಮಿಟ್ ವಿಭಾಗದಲ್ಲಿ ಕೆ ವಿ ಜಿ ಐ ಪಿ ಎಸ್ ನ 10 ನೇ ತರಗತಿಯ ವಿದ್ಯಾರ್ಥಿ ವರ್ಷಿತ್ ಎಮ್ ಪ್ರಥಮ ಸ್ಥಾನ ಪಡೆದು ನವೆಂಬರ್ 27 ರಿಂದ ಡಿಸೆಂಬರ್ 2 ನೇ ತಾರೀಕಿನವರೆಗೆ ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಇವರಿಗೆ ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.

ಶಾಲಾ ಮುಖ್ಯ ಕಾರ್ಯನಿರ್ವಾನಾಧಿಕಾರಿ ಡಾ.ಉಜ್ವಲ್ ಯು ಜೆ, ಕೆವಿಜಿ ಐಟಿಐ ನ ಪ್ರಾಂಶುಪಾಲ ಚಿದಾನಂದ ಬಾಳಿಲ, ಸುಳ್ಯ ನಗರ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಕೆವಿಜಿ ಡೆಂಟಲ್ ಕಾಲೇಜಿನ ವೈದ್ಯ ಡಾ. ರೇವಂತ್,ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಆ. 26 ರಂದು ಶಾಲಾ ಸಭಾಂಗಣದಲ್ಲಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಇವರಿಗೆ ಕರಾಟೆ ಶಿಕ್ಷಕರಾದ ಚಂದ್ರಶೇಖರ್ ಕನಕಮಜಲು ಮಾರ್ಗ ದರ್ಶನ ನೀಡಿರುತ್ತಾರೆ. ಇವರು ವಸಂತ ಕುಮಾರ್ ಮೀನಗದ್ದೆ ಹಾಗೂ ಜಯಶ್ರೀ ವಸಂತ ಕುಮಾರ್ ಮೀನಗದ್ದೆ ಇವರ ಪುತ್ರನಾಗಿರುತ್ತಾನೆ.