ಗುರುಂಪು ಬಳಿ ಅಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ -ಸವಾರರಿಗೆ ಗಾಯ

0

ಆಲೆಟ್ಟಿ ರಸ್ತೆಯ ಗುರುಂಪು ಬಳಿ ರಿಕ್ಷಾವೊಂದಕ್ಕೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು‌ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ‌.

ಸುಳ್ಯದಿಂದ ಕೇರಳ ದ ಬಂದಡ್ಕ ಕಡೆಗೆ ಹೋಗುತ್ತಿದ್ದ ಬೈಕಿಗೆ ಆಲೆಟ್ಟಿ ಕಡೆಯಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಹಾಗೂ ಸಹ ಸವಾರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ರು ಗಾಯಗೊಂಡವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಹಿಂದೆ ಕಳೆದ ಎರಡು ವಾರದ ಹಿಂದೆ ಬೈಕ್ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿತ್ತು.ಇದೀಗ ಅದೇ ಸ್ಥಳದಲ್ಲಿ ಅಫಘಾತವಾಗಿದೆ. ರಸ್ತೆಯ ಮೇಲೆ ಕೆಸರು ಮಿಶ್ರಿತ ಮಣ್ಣು ಇದ್ದುದರಿಂದ ಬೈಕ್ ಸ್ಕಿಡ್ ಆಗಿ ರಿಕ್ಷಾಕ್ಕೆ ಗುದ್ದಿದೆ ಎಂದು ಸ್ಥಳೀಯರು ಮಾತಮಾಡಿಕೊಳ್ಳುತ್ತಿದ್ದರು.