ಭಾರತ ರಕ್ಷಣಾ ಸಚಿವಾಲಯದ ಪ್ರತಿಷ್ಠಿತ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಡೆಪ್ಯುಟಿ ಇಂಜಿನಿಯರ್ ಆಗಿ ಕನಕಮಜಲಿನ ಅನುಜ್ಞಾ ಪಿ.ವಿ.

0

ಭಾರತ ರಕ್ಷಣಾ ಸಚಿವಾಲಯದ ಪ್ರತಿಷ್ಠಿತ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಇಲ್ಲಿ ಡೆಪ್ಯುಟಿ ಇಂಜಿನಿಯರ್ ( ಮಹಿಳಾ ಆಫೀಸರ್ ) ಆಗಿ ಕನಕಮಜಲಿನ ಅನುಜ್ಞಾ ಪಿ.ವಿ ನೇಮಕಗೊಂಡಿದ್ದಾರೆ.

ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸ. ಹಿ.ಪ್ರಾ.ಶಾಲೆ ಎಣ್ಮೂರು, ಹಿರಿಯ ಪ್ರಾ. ಶಿಕ್ಷಣವನ್ನು ಪ್ರಗತಿ ಆಂಗ್ಲ ಮಾದ್ಯಮ ಶಾಲೆ ಕಾಣಿಯೂರು, ಪ್ರೌಢಶಿಕ್ಷಣ ವನ್ನು ಸೈಂಟ್ ವಿಕ್ಟರ್ ಪ್ರೌಢಶಾಲೆ ಪುತ್ತೂರು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ವೆ ಪುತ್ತೂರು ಇಲ್ಲಿ ಪೂರೈಸಿ ಬಳಿಕ
ತಮ್ಮ ಬಿ. ಟೆಕ್ ಪದವಿಯನ್ನು ದೇಶದ ಪ್ರತಿಷ್ಠಿತ ಎನ್ಐಟಿಗಳಲ್ಲಿ ಎರಡನೇ ಟಾಪ್ ಕಾಲೇಜ್ ಎನ್ಐಟಿಕೆ ಸುರತ್ಕಲ್ ಇಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗದಲ್ಲಿ ಪೂರೈಸಿರುತ್ತಾರೆ.

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇವರು ನಡೆಸಿದ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ಡೆಪ್ಯುಟಿ ಇಂಜಿನೀಯರ್ ಆಗಿ ನೇಮಕಗೊಂಡು ಸೇವೆಗೆ ಸೇರಿದ್ದು, ಇದೀಗ ನಳಂದ ಇನ್ಸಿಟ್ಯೂಟ್ ಆಫ಼್ ಟ್ರೈನಿಂಗ್ ಸೆಂಟರ್ ಬೆಂಗಳೂರು ಇಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಇವರು ಕರ್ನಾಟಕ ಶಾಸ್ತ್ರೀಯ ಸಂ

ಗೀತವನ್ನು ವಿದುಷಿ ಶಂಕರಿಮೂರ್ತಿ ಬಾಳಿಲ ಇವರಲ್ಲಿ ಅಭ್ಯಾಸ ಮಾಡಿ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಲ್ಲದೆ ಭಾರತ್ ಸ್ಕೌಟ್ ಗೈಡ್ಸ್ ಸಂಸ್ಥೆಯ ಗೈಡ್ಸ್ ರಾಜ್ಯ ಪುರಸ್ಕಾರವನ್ನು ಪಡೆದಿದ್ದಾರೆ.

ಇವರು ಕನಕಮಜಲು ದಿ.ವಸಂತ ಮಾಸ್ತರ್ ಪಲ್ಲತ್ತಡ್ಕ ಮತ್ತು ಕದಿಕಡ್ಕ ಸ.ಹಿ.ಪ್ರಾ.ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಎನ್.ಟಿ.ಇವರ ಸುಪುತ್ರಿ.

ಇವರ ಹಿರಿಯ ಸಹೋದರಿ ಡಾ.ಅಭಿಜ್ಞಾ ಪಲ್ಲತ್ತಡ್ಕ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಧಾರವಾಡ ಇಲ್ಲಿ ದಂತ ವೈದ್ಯಕೀಯ ಪದವಿ ಪಡೆದು ಅಲ್ಲೇ ಸೇವಾ ವೃತ್ತಿಯನ್ನು ಮಾಡುತ್ತಿದ್ದಾರೆ.