ಪೆರುವೋಡಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಜ್ಯೋತಿ ಯುವಕ ಮಂಡಲ ಮುಕ್ಕೂರು ಯುವಸೇನೆ ಮುಕ್ಕೂರು ಪೆರುವಾಜೆ ಇದರ ಜಂಟಿ ಆಶ್ರದಲ್ಲಿ ದಲ್ಲಿ ಸೆ.01 ರಂದು ಶ್ರೀ ಪೆರುವೂಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರಗಿತು.


ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಅರ್ಚಕ ಸುರೇಶ್ ಉಪಾಧ್ಯಾಯರು ಎಣ್ಣೆ ಕಂಬಕ್ಕೆ ಪೂಜೆ ಸಲ್ಲಿಸಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಬಳಿಕ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಮಹಿಳೆಯರು, ಪುರುಷರು ಭಾಗವಹಿಸಿ ಸಂಭ್ರಮಿಸಿದರು ಮಧ್ಯಾಹ್ನ ಎಲ್ಲರಿಗೂ ಸಿಹಿ ಬೋಜನದ ವ್ಯವಸ್ಥೆ ಮಾಡಲಾಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕಮಂಡಲದ ಗೌರವಾಧ್ಯಕ್ಷರಾದ
ನಾರಾಯಣ ಕೊಂಡೆಪಾಡಿ ಇವರು ವಯಿಸಿ 35 ವರ್ಷಗಳಿಂದ ಮೊಸರು ಕುಡಿಕೆ ಉತ್ಸವ ಆಚರಣೆ ನಡೆಸುತ್ತಿರುವ ನಮ್ಮಸಂಘಟನೆಗೆ ಶ್ರೀ ಕೃಷ್ಣ ನೇ ಪ್ರೇರಣೆ
ನಮ್ಮ ಸಂಘಟನೆಯ ಕಾರ್ಯಕರ್ತರು ಕೂಡ ಅನೇಕ ಸವಾಲುಗಳನ್ನು ಎದುರಿಸಿ ತಾಳ್ಮೆಯಿಂದ ಸಮಾಜಮುಖಿ ಕಾರ್ಯಗಳನ್ನು ಒಗ್ಗಟ್ಟಿನಿಂದ ಸಂಘಟಿಸಿ ಜನಮನ್ನಣೆಗೆ ಪಾತ್ರರಾಗಬೇಕೆಂದು ಹೇಳಿದರು.
ಅತಿಥಿ ನೆಲೆಯಲ್ಲಿ ಮಾತನಾಡಿದ ಶ್ರೀ ಮೋಹನ ಬೈಪಡಿತ್ತಾಯ ಶ್ರೀ ಕೃಷ್ಣನ ಬಾಲಲೀಲೆಯನ್ನು ಕೊಂಡಾಡಿ ದೇವಸ್ಥಾನಗಳಲ್ಲಿ ಭಕ್ತರು ಪಾಲಿಸಬೇಕಾದ ಕೆಲವು ಶಿಷ್ಟಾಚಾರದ ಬಗ್ಗೆ ಮಾಹಿತಿ ನೀಡಿದರು ಮಕ್ಕಳಿಗೆ ಸಂಸ್ಕಾರ ಕೊಡುವ ಮೂಲಕ ಪೋಷಕರು ಮಕ್ಕಳಲ್ಲಿ ಸಮಾಜಮುಖಿ ಚಿಂತನೆಯನ್ನು ಮಾಡಿಸಬೇಕೆಂದರು.
ಯುವಕ ಮಂಡಲದ ಯುವ ಸೇನೆಯ ಕಾರ್ಯಕರ್ತರನ್ನು ಶ್ಲಾಘನಿಸಿದರು.


ಸ ಹಿ ಪ್ರಾ ಶಾಲೆ ಐವರ್ನಾಡು ಇದರ ಶಿಕ್ಷಕರು ಅರವಿಂದ ಕೆ ಉಪಸ್ಥಿತರಿದ್ದರು.
ನಿವೃತ್ತ ಬ್ಯಾಂಕ್ ಉದ್ಯೋಗಿ ದಾನಿಗಳು ಕೃಷಿಕ ಹೊನ್ನಪ್ಪ ಗೌಡ ಚಾಮುಂಡಿಮೂಲೆ,
ದಾನಿಗಳು ಪ್ರಗತಿ ಪರ ಕೃಷಿಕರು ಚಲನ ಚಿತ್ರ ನಟರು,ಮೂಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು. ಪೆರುವೋಡಿ ದೇವಸ್ಥಾನ ದ ಮೊಕ್ತೇಸರರು ಅದ ಕುoಬ್ರ ದಯಾಕರ ಆಳ್ವ ಅವರನ್ನು ಸಲ್ಮಾನಿಸಲಾಯಿತು.
ಸುರೇಶ್ ಉಪಾಧ್ಯಾಯ, ರೈ ಕುಂಜಾಡಿ ,ನವೀನ್ ಶೆಟ್ಟಿ ಬರಮೇಲು ಇವರಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಶಾಲಪ್ಪ ಗೌಡ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು ಸತ್ಯ ಪ್ರಸಾದ್ ಕೆ ವಂದನಾರ್ಪಣೆ ಸಲ್ಲಿಸಿದರು ಶ್ರೀಮತಿ ವಿದ್ಯಲಕ್ಷ್ಮಿಪೂವಜೆ ಹಾಗೂ ದೀಕ್ಷಾ ನೀರ್ಕಜೆ ಕಾರ್ಯಕ್ರಮ ನಿರೂಪಿಸಿದರು.