Home Uncategorized ಮುರುಳ್ಯ ಶಾಂತಿ ನಗರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಭೆ

ಮುರುಳ್ಯ ಶಾಂತಿ ನಗರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಭೆ

0

ಸ.ಹಿ.ಪ್ರಾ. ಶಾಲೆ ಮುರುಳ್ಯ ಶಾಂತಿ ನಗರ ಇದರ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷರಾದ ಜಗದೀಶ ಹುದೇರಿಯವರ ಅಧ್ಯಕ್ಷತೆಯಲ್ಲಿ ಡಿ. 11ರಂದು ಶಾಲಾ ಸಭಾಭವನದಲ್ಲಿ ನಡೆಯಿತು.


ವೇದಿಕೆಯಲ್ಲಿ ಹಿ.ವಿ. ಸಂಘದ ಉಪಾಧ್ಯಕ್ಷೆ ಶ್ರೀಮತಿ ನಿರ್ಮಲಾ ರಾಜೇಶ್, ಕಾರ್ಯದರ್ಶಿ ರೋಹಿತಾಶ್ವ ಹೆದ್ದಾರಿ, ಜತೆ ಕಾರ್ಯದರ್ಶಿ ನೌಫಲ್, ಕ್ರೀಡಾ ಕಾರ್ಯದರ್ಶಿ ಕಿರ್ತನ್ ಕಳತ್ತಾಜೆ,
ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ ನಡುಬೈಲು, ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಸಂಘದ ಗೌರವ ಅಧ್ಯಕ್ಷರಾಗಿ ವಸಂತ ನಡುಬೈಲು ಕಾರ್ಯಕಾರಿ ಸಮಿತಿಗೆ ನಾಗೇಶ್ ಗೋಳ್ತಿಲ, ಪುಟ್ಟಣ್ಣಗೌಡ ಅಲೆಕ್ಕಾಡಿ, ಜಮಾಲ್ ಪಡ್ಪಿನಂಗಡಿ, ಸತೀಶ್ ಪೋಗ್ಗೋಳಿ, ಮೋಕ್ಷಿತ್, ದೀರಜ್ ಮಾಲೆತ್ತಾರು, ಚಿದಾನಂದ ಹುದೇರಿ, ಕೃಷ್ಣಪ್ಪ ಶಾಂತಿನಗರ, ಶ್ರೀಮತಿ ವೀಣಾ ಹುದೇರಿ, ಜಾನಕೀ ಮುರುಳ್ಯ, ದಿನೇಶ್ ನಡುಬೈಲು, ಸಾಧಿಕ್ ಸಮಹಾದಿ, ಕೇಶವ ಕುಕ್ಕಟ್ಟೆ, ಗಣೇಶ್ ಹುದೇರಿ, ಸೀತಾರಾಮ ಕೆ.ಜಿ ಕಳತ್ತಾಜೆ, ಧರ್ಮಪಾಲ ಶಾಂತಿನಗರ, ಶ್ರೀಕರ ಭಟ್ ಕಳತ್ತಾಜೆ, ಗಣೇಶ್ ಶಾಂತಿನಗರ ಆಯ್ಕೆಯಾದರು. ಸಂಘದ ಕಾರ್ಯ ಹಾಗೂ ಸದಸ್ಯರ ಜವಾಬ್ದಾರಿಗಳ ಬಗ್ಗೆ ಜಗದೀಶ ಹುದೇರಿ ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿ, ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.

NO COMMENTS

error: Content is protected !!
Breaking