ಸುಳ್ಯ 11 ನೇ ವರುಷದ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ

0

ಸುಳ್ಯ ವಿಶ್ವ ಹಿಂದೂ ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 11 ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವಕ್ಕೆ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.


ಸುಳ್ಯದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಕೇಸರಿ ಧ್ವಜ ಹಸ್ತಾಂತರಿಸಿ ಮಡಿಕೆ ಒಡೆಯುವ ಮುಖಾಂತರ ಶೋಭಾಯಾತ್ರೆಗೆ ಚಾಲನೆ ನೀಡಿದರು.

ವೀರ ಹಿಂದೂ ಯುವಕರಿಂದ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಶೋಭಾಯತ್ರೆಯು ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ಅಂಬಟೆಡ್ಕದಿಂದ ಕೆ.ವಿ.ಜಿ ವೃತ್ತದಿಂದ ಮುಂದಕ್ಕೆ ಸಾಗಿ ವಿವೇಕಾನಂದ ಸರ್ಕಲ್ ಮೂಲಕ ಜೂನಿಯರ್ ಕಾಲೇಜ್ ರಸ್ತೆಯಿಂದಾಗಿ ಜ್ಯೋತಿ ವೃತ್ತದಿಂದ ಹಿಂತಿರುಗಿ ಮುಖ್ಯ ರಸ್ತೆಯ ಮೂಲಕ ಗಾಂಧಿನಗರದ ತನಕ‌ ಬಂದು ಅಲ್ಲಿಂದ ರಥಬೀದಿಯಾಗಿ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನಗೊಳ್ಳಲಿರುವುದು. ವಿಶೇಷ ಆಕರ್ಷಣೆ ಯಾಗಿ ದೇವಸ್ಥಾನದ ಬಳಿ ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ನಡೆಯಲಿದೆ.


ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ, ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ, ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಹರೀಶ್ ರೈ ಉಬರಡ್ಕ, ಪಿ.ಕೆ.ಉಮೇಶ, ಚನಿಯ ಕಲ್ತಡ್ಕ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಸುಭೋದ್ ಶೆಟ್ಟಿ ಮೇನಾಲ, ಜಯರಾಮ ರೈ ಜಾಲ್ಸೂರು, ಪ್ರಧಾನಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ನವೀನ್ ಎಲಿಮಲೆ, ಬಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ , ಹರಿಪ್ರಸಾದ್ ಎಲಿಮಲೆ, ಉಪಾಧ್ಯಕ್ಷ ರವಿಚಂದ್ರ ಕೊಡಿಯಾಲಬೈಲು, ದೇವಿಪ್ರಸಾದ್ ಅತ್ಯಾಡಿ, ವಿನಯ್ ಪಾಡಾಜೆ, ರಾಜೇಶ್ ಕಲ್ಲುಮುಟ್ಲು, ಪಾರ್ವತಿ ಕುಂಚಡ್ಕ, ಸುನಿಲ್ ಕೇರ್ಪಳ, ರಾಜೇಶ್ ಬೇರಿಕೆ, ರೀನಾ ಚಂದ್ರಶೇಖರ, ವಿಶಾಲ ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.