ಉಬರಡ್ಕದಲ್ಲಿ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ಇದರ ವತಿಯಿಂದ ೧೪ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ.7 ರಿಂದ 8 ರವರೆಗೆ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.

ಸೆ.7 ರಂದು ಪೂರ್ವಾಹ್ನ ಸ್ಥಳ ಶುದ್ಧಿ, ಗಣಪತಿ ಪ್ರತಿಷ್ಟೆ, ಭಜನೆ, ದೇವಾಲಯದಲ್ಲಿ ಸಾರ್ವಜನಿಕ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಊರಿನ ಕಲಾವಿದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ರಾತ್ರಿ ದೀಪಾಂಜಲಿ ಮಹಿಳಾ ಮಂಡಳಿ ಶಾಂತಿನಗರ , ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈ ಮಡಿಯಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸನ್ಮಾನ, ಸಭಾ ಕಾರ್ಯಕ್ರಮ

ಸೆ.7 ರಂದು ರಾತ್ರಿ ದೇವಾಲಯದ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವು ನಡೆಯಿತು.


ಸಮಾರಂಭದಲ್ಲಿ ದೇವತಾರಾಧನ ಸಮಿತಿಯ ಅಧ್ಯಕ್ಷರಾದ ಶಶಿಧರ ನಾಯರ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಘವ ರಾವ್, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿಕೇಶ್ ಉಬರಡ್ಕ, ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ದೇವತಾರಾಧನ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಕಕ್ಕೆಬೆಟ್ಟು, ದೇವಾಲಯದ ಅರ್ಚಕ ಮಧ್ವರಾಜ್ ಭಟ್ ಉಪಸ್ಥಿತರಿದ್ದರು.

ಸನ್ಮಾನ
ಗಾಯಗಳಿಗೆ ಹಿಂದಿನ ಕಾಲದಲ್ಲಿಯೇ ಆಯುರ್ವೇದ ಔಷಧಿಯಾದ ಪಂಚವಲ್ಲೀ ತೈಲ ದ ತಯಾರಕರೂ, ಹಿರಿಯರೂ ಆದ ಯು.ಅನಂತೇಶ್ವರ ಭಟ್ ಉಬರಡ್ಕ, ದೇವತಾರಾಧನ ಸಮಿತಿಯ ಸ್ಥಾಪಕಾಧ್ಯಕ್ಷರು ನಿವೃತ್ತ ವಲಯಾರಣ್ಯಧಿಕಾರಿಯಾದ ಬೆಳ್ಯಪ್ಪ ಗೌಡ ಮಡ್ತಿಲ, ಜನಸೇವೆ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಜನಸೇವಕರೆಂದೆನಿಸಿಕೊಂಡ ಮಾನ ಪಾಟಾಳಿ ಉಬರಡ್ಕ, ದೇಶದ ಸೇವೆ ಮಾಡಿ ನಿವೃತ್ತ ಯೋಧರಾದ ದಿವಾಕರ ಗೌಡ ಶೆಟ್ಟಿಹಿತ್ಲು ಮತ್ತು ಜಯಕರ ಮಡ್ತಿಲ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಪ್ರತಿಭಾವಂತ ಮಹಿಳೆ ಡಾ.ಪ್ರಶಾಂತಿ ಶಶಿಕಾಂತ್, ಬಾಲ್ಯದಲ್ಲಿಯೇ ಯೋಗಪಟುವಾಗಿ ಅಪಾರ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭೆ ತನುಷ್ ಮೋಂಟಡ್ಕ, ಉತ್ತಮ ಗುಣನಡತೆಯ, ಜನರೊಂದಿಗೆ ಬಾಂದವ್ಯದಲ್ಲಿರುವ ಗುರುವ ಪಾನತ್ತಿಲ ಇವರನ್ನು ಸನ್ಮಾನಿಸಲಾಯಿತು.

ನಿಕೇಶ್ ಉಬರಡ್ಕ ಸ್ವಾಗತಿಸಿ, ರಾಘವ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರಿಪ್ರಸಾದ್ ಪಾನತ್ತಿಲ ವಂದಿಸಿದರು. ಶ್ರೀಮತಿ ರಾಜೇಶ್ವರಿ ಮಧುಸೂದನ್ ಮತ್ತು ಶ್ರೀಮತಿ ಶ್ರೀಲತಾ ಪ್ರಶಾಂತ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.

ಇಂದು ಸಂಜೆ ಬ್ಯಾಂಡ್ ವಾಲಗದೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ.