ವಸ್ತ್ರಗಳ ಶುಭ್ರ ಬಿಳುಪಿಗಾಗಿ ಬಳಸಿ ಗುರು ಜನತಾ ಡಿಟರ್ಜೆಂಟ್ ಪೌಡರ್

0

ಪುಟ್ಟ ಊರಾದ ಸುಳ್ಯದಲ್ಲಿ ಕಳೆದ ಮೂರು ದಶಕಗಳ ಹಿಂದೆ ಕೈಗಾರಿಕೆಯನ್ನು ಸ್ಥಾಪಿಸಿ ಜನರ ಮನಗೆದ್ದ ಸಂಸ್ಥೆ ಹಳೆಗೇಟಿನ ಕಮಿಲ ಕೆಮಿಕಲ್ ಇಂಡಸ್ಟ್ರೀಸ್. ಇದೀಗ ತನ್ನ ನೆಚ್ಚಿನ ಗ್ರಾಹಕರಿಗೆ ಒಂದು ಹೆಜ್ಜೆ ಮುಂದೆ ಎನ್ನುವಂತೆ ವಸ್ತ್ರಗಳ ಶುಭ್ರ ಬಿಳುಪಿಗಾಗಿ ಗುರು ಜನತಾ ಡಿಟರ್ಜೆಂಟ್ ಪೌಡರ್‌ನ್ನು ಮಾರುಕಟ್ಟೆಗೆ ಹೊಸತಾಗಿ ಪರಿಚಯಿಸುತ್ತಿದೆ.

ನಿತ್ಯ ಬದುಕಿನ ಸ್ವಚ್ಛತೆಗಾಗಿ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ವತಿಯಿಂದ ಈ ಗುರು ಜನತಾ ಡಿಟರ್ಜೆಂಟ್ ಪೌಡರ್ ತಯಾರಿಸಲಾಗಿದ್ದು, 6ಕೆ.ಜಿ. ಕೆಜಿ ಪ್ಯಾಕೇಟ್‌ನಲ್ಲಿ ಒಂದು ಕೆಜಿ ಉಚಿತವಾಗಿದ್ದು, ಕೇವಲ 250 ರೂ. ಗಳು ಮಾತ್ರ.

ಸುಳ್ಯ, ಪುತ್ತೂರು ಸಮೀಪದ ಎಲ್ಲಾ ಅಂಗಡಿ, ಮಾಲ್‌ಗಳಲ್ಲಿ ಈ ಜನತಾ ಡಿಟರ್ಜೆಂಟ್ ಲಭ್ಯವಿದೆ ಎನ್ನುತ್ತಾರೆ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನ ಮಾಲಕರಾದ ಸುರೇಶ್ಚಂದ್ರ ಕಮಿಲ.

1993 ರಲ್ಲಿ ಸುಳ್ಯ ಸಮೀಪದ ಕಮಿಲದಲ್ಲಿ ಆರಂಭಗೊಂಡ ಸೋಪ್ ಫ್ಯಾಕ್ಟರಿ ಬಳಿಕ ಹಳೆಗೇಟಿಗೆ ಸ್ಥಳಾಂತರ ಗೊಂಡಿತು.


ವ್ಯವಸ್ಥಿತವಾದ ಕಾರ್ಖಾನೆಯಾಗಿ ಮಾರ್ಪಾಡಾಯಿತು. ಬಳಿಕದ ವರ್ಷಗಳಲ್ಲಿ ಸೋಪ್ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ವೈವಿಧ್ಯಮಯ ಸೋಪ್‌ಗಳನ್ನು ಹೊರ ತಂದಿರುವ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ “ಡ್ರಗ್ಸ್ ಕಂಟ್ರೋಲ್ ಆಫ್ ಇಂಡಿಯಾ”ದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ಸಂಸ್ಥೆಯಾಗಿದೆ.

ಆರಂಭದಲ್ಲಿ ಬಟ್ಟೆ ತೊಳೆಯುವ ಕ್ಲೀನ್ ಎಂಬ ಡಿಟರ್ಜೆಂಟ್ ಕ್ಷೇತ್ರಕ್ಕಿಳಿದ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಈಗ ವಿವಿಧ ಹೆಸರುಗಳಲ್ಲಿ ಮತ್ತು ಬ್ರಾಂಡ್‌ಗಳಲ್ಲಿ 20ಕ್ಕೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆ ತರುದಿದೆ.
ಕುಶಿ, ಗುರು, ಕ್ಲೀನ್ ಎಂಬ ಬಟ್ಟೆ ತೊಳೆಯುವ ಸೋಪ್ ಹಾಗೂ ಸೋಪ್ ಹುಡಿ, ಗ್ಯಾಲಕ್ಸಿ ಎಂಬ ಪಾತ್ರೆ ತೊಳೆಯುವ ಸೋಪ್ ಮತ್ತು ಬಾಕ್ಸ್ , ಕಡೆಲೆ ಹುಡಿ ಮಿಶ್ರಿತ ಮೈ ಸ್ನಾನ ಸೋಪ್, ಕುಶಿ ಮತ್ತು ಕ್ಲೀನ್ ಎಂಬ ಮಲ್ಟಿ ಪರ್ಪಸ್ ಲಿಕ್ವಿಡ್ ಎಂಬ ಫ್ರಂಟ್ ಲೋಡ್ ಮತ್ತು ಟಾಫ್ ಲೋಡ್ ವಾಶ್ ಲಿಕ್ವಿಡ್ ಹೀಗೆ ಹಲವಾರು ಕಮಿಲ ಕೆಮಿಕಲ್ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬಟ್ಟೆ ಒಗೆಯಲು, ಪಾತ್ರ ತೊಳೆಯಲು, ನೆಲ ಶುಚಿಗೊಳಿಸಲು, ಕಾರ್ ಇತರ ವಾಹನಗಳನ್ನು ತೊಳೆಯಲು ಹೀಗೆ ಎಲ್ಲಾ ತರಹದ ಕ್ಲೀನಿಂಗ್‌ಗೆ ಬೇಕಾದ ಸೋಪ್, ಡಿಡರ್ಜೆಂಟ್‌ಗಳು, ಲಿಕ್ವಿಡ್‌ಗಳನ್ನು ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಕರ್ನಾಟಕ ಹಾಗು ಕೇರಳದಾದ್ಯಂತ ಮಾರುಕಟ್ಟೆಯನ್ನು ಹೊಂದಿರುವ ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೂ ಇದೆ. ಹಾಗೂ ಹಲವಾರು ನಿರದ್ಯೋಗಿಗಳಿಗೆ ಇಲ್ಲಿ ಉದ್ಯೋಗ ಲಭಿಸಿದ್ದು ಇನ್ನೊಂದು ಹೆಮ್ಮೆಯ ವಿಚಾರವಾಗಿದೆ.