ಪಂಜದಲ್ಲಿ ಗಣೇಶೋತ್ಸವದ ವಿಜೃಂಭಣೆಯ ಶೋಭಾಯಾತ್ರೆ- ಜಲಸ್ತಂಭನ

0

🔷 ಪಿಲಿ ರಾಧಣ್ಣ ತಂಡ, ನಾಸಿಕ್ ಬ್ಯಾಂಡ್, ಗೊಂಬೆಗಳು, ಭಜನಾ ತಂಡಗಳು ವಿಶೇಷ ಆಕರ್ಷಣೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಶೋಭಾಯಾತ್ರೆ-ಜಲಸ್ತಂಭನ ಸೆ.9ರಂದು ಸಂಜೆ ವಿಜೃಂಭಣೆಯಿಂದ ನಡೆಯಿತು .

ಎ.ಸಿ.ಎಫ್ ಪ್ರವೀಣ್ ಕುಮಾರ್ ಶೆಟ್ಟಿ ತೆಂಗಿನ ಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ, ಆರಾಧನಾ ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ,ಅಧ್ಯಕ್ಷ ಸವಿತಾರ ಮುಡೂರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಆರಾಧನಾ ಸಮಿತಿಯ ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಕುದ್ವ, ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ, ಶೋಭಾ ಯಾತ್ರೆಯ ಸಂಚಾಲಕ ಅನುರಾಜ್ ಕಕ್ಯಾನ,ವಿವಿಧ ಸಮಿತಿಗಳ ಸಂಚಾಲಕರು, ಭಕ್ತಾದಿಗಳು ಉಪಸ್ಥಿತರಿದ್ದರು.


ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಿತು. ಶೋಭಾಯಾತ್ರೆಯಲ್ಲಿ “ಖ್ಯಾತ ಪಿಲಿ ರಾಧಣ್ಣ ತಂಡದಿಂದ ತುಳುನಾಡಿನ ಹೆಮ್ಮೆಯ ಹುಲಿ ವೇಷ-ಕುಣಿತ, ಹಿಂದೂ ಜಾಗರಣ ವೇದಿಕೆಯ ನಾಸಿಕ್ ಬ್ಯಾಂಡ್ , ಗೊಂಬೆಗಳು ,ಕುಣಿತ ಭಜನೆ ಪಾಲ್ಗೊಂಡು ಮೆರುಗು ನೀಡಿತ್ತು.