ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಓಣಂ ಆಚರಣೆ

0

ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಓಣಂ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಸೆ. 12ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಶೈಲಾ ಎಂ.ಪೈ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಜಯಪ್ರಸಾದ್ ಆನೆಕಾರ, ಡಾ. ಸುಹಾಸ್, ಡಾ. ಪ್ರಸನ್ನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭೋದಕ ಭೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಶ್ರೀಯಾ ಶಿಜಿ ಕುಮಾರ್ ಸ್ವಾಗತಿಸಿ, ಡಾ. ಅಲೀನಾ ಜಾನ್ ವಂದಿಸಿದರು. ಡಾ. ಆಯಿಷಾ ರೌಹಾ, ಡಾ. ಜೆರ್ಲಿನ್ ಕೆ ಜೋನ್ಸನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ. ಅನುಜ್ಞಾ ಬಿ.ಎಂ. ನಿರ್ವಹಿಸಿದರು. ಓಣಂ ಆಚರಣೆಯ ವೈಶಿಷ್ಠ್ಯವಾಗಿ ವಿದ್ಯಾರ್ಥಿಗಳು ಓಣಂ ಉಡುಗೆ ಧರಿಸಿ, ಪೂಕಳಂ ಹಾಕಿ, ಓಣಂ ಪಾಯಸವನ್ನು ನೀಡಿ ಸಂಭ್ರಮಿಸಿದರಲ್ಲದೆ ಸ್ಪರ್ಧಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.