ಪುಟ್ಟಣ್ಣ ನಾಯ್ಕ ಉಡುವೆಕೋಡಿ ನಿಧನ

0

ಕಲ್ಮಡ್ಕ ಗ್ರಾಮದ ಉಡುವೆಕೋಡಿ ಪುಟ್ಟಣ್ಣ ನಾಯ್ಕ ಎಂಬವರು ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಪುಟ್ಟಣ್ಣ ನಾಯ್ಕರವರ ಕಾಲಿನಲ್ಲಿ ಕೆಲ ದಿನಗಳ ಹಿಂದೆ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಇಂದು ಮುಂಜಾನೆ ಮಲಗಿದ್ದಲ್ಲಿಂದ ಏಳುವಾಗ ಒಂದೊಮ್ಮೆಲೆ ಕುಸಿದು ಬಿದ್ದು ಮೃತರಾದರೆನ್ನಲಾಗಿದೆ.

ಮೃತರು ಪುತ್ರರಾದ ವೀರಪ್ಪ ಉಡುವೆಕೋಡಿ, ಶಿವಪ್ಪ ನಾಯ್ಕ ಉಡುವೆಕೋಡಿ, ಕುಂಞಣ್ಣ ನಾಯ್ಕ ಉಡುವೆಕೋಡಿ ಅಲೆಕ್ಕಾಡಿ, ಪುತ್ರಿಯರಾದ ದೇವಕಿ ರಾಮಚಂದ್ರ ಪಾಡಾಜೆ, ಲೀಲಾವತಿ ಈಶ್ವರ ಕಲ್ಮಡ್ಕ , ಸಹೋದರಿ ಲಕ್ಷ್ಮೀ ಪಾಡಾಜೆ, ಹಾಗೂ ಸೊಸೆಯಂದಿರಾದ ರೇವತಿ, ಸುಂದರಿ, ಲೀಲಾವತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.