ಜಾಲ್ಸೂರು ಅಡ್ಕಾರು ಮಸೀದಿಯ ವತಿಯಿಂದ ಬೃಹತ್ ಮೀಲಾದ್ ಜಾಥಾ

0

ವಿಶೇಷ ಮೆರುಗು ನೀಡಿದ ವಿದ್ಯಾರ್ಥಿಗಳ ಆಕರ್ಷಕ ಧಫ್ ಪ್ರದರ್ಶನ ಹಾಗೂ ಫ್ಲವರ್ ಶೋ

ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಪ್ರಯುಕ್ತ ಜಾಲ್ಸೂರು ಅಡ್ಕಾರು ಮುಹಿಯ್ಯುದ್ದೀನ್ ಜುಮಾ ಮಸೀದಿಯ ವತಿಯಿಂದ ಬೃಹತ್ ಮೀಲಾದ್ ಜಾಥಾ ನಡೆಯಿತು.

ಜಾಲ್ಸೂರು ಅಡ್ಕಾರು ಮಸೀದಿಯಿಂದ ಆರಂಭಗೊಂಡ ಮೀಲಾದ್ ಜಾಥಾ ಜಾಲ್ಸೂರು ಟೌನ್ ನಲ್ಲಿ ಸಮಾಪ್ತಿಗೊಂಡಿತು.

ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಜಿ.ಪಿ. ಅಬ್ದುಲ್ ಕುಂಞಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ಸಂದೇಶ ಭಾಷಣ ಮಾಡಿದರು‌. ಅಧ್ಯಾಪಕರುಗಳಾದ ಶಾಹುಲ್ ಹಮೀದ್ ಸಖಾಫಿ, ಜುನೈದ್ ಹಿಮಮಿ ಸಖಾಫಿ, ಹಬೀಬ್ ಹಿಮಮಿ , ಸಾಬಿತ್ ಫಾಳಿಲಿ , ಸ್ವಾದಿಕ್ ಫಾಳಿಲಿ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು ಊರಿನ ಹಿರಿಯ ಕಿರಿಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಧಫ್ ಪ್ರದರ್ಶನ ಜಾಥಾಕ್ಕೆ ಮೆರುಗು ನೀಡಿತು.