ಶಾಸಕಿ ಭಾಗೀರಥಿ ಮುರುಳ್ಯ ರಿಂದ ಉದ್ಘಾಟನೆ
ಸುಳ್ಯ ಕೃಷಿ ಇಲಾಖೆ ಇದರ ವತಿಯಿಂದ ರೈತರಿಗೆ ಕೃಷಿ ಉಪಕರಣ ಮತ್ತು ಸವಲತ್ತು ವಿತರಣೆ ಕಾರ್ಯಕ್ರಮವು ಸೆ.17 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಉಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕಿ ” ರೈತರಿಗೆ ಕೇಂದ್ರ ಸರಕಾರದ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ ಅದರಲ್ಲಿ ಈ ಯೋಜನೆಯು ಕೂಡಾ ಒಂದು ಇದನ್ನು ರೈತರು ಸಮಪರ್ಕವಾಗಿ ಬಳಸಿಕೊಂಡು ಹೆಚ್ಚಿನ ಅದಾಯವನ್ನು ಪಡೆಯುವಂತಾಗಲಿ” ಎಂದು ಶುಭಹಾರೈಸಿದರು. ಬಳಿಕ ಆಕಸ್ಮಿಕ ವಾಗಿ ಮರಣ ಹೊಂದಿದ ಕೃಷಿಕರ ಕುಟುಂಬಕ್ಕೆ ಎರಡು ಲಕ್ಷ ಅನುದಾನ ಪರಿಹಾರ ವಿತರಣೆ, ಇಪ್ಪತ್ತ ಮೂರು ಫಲಾನುಭವಿಗಳಿಗೆ ಕೃಷಿ ಯಂತ್ರೋಪರಣ, ಮೂವತ್ತೈದು ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕ ಯಂತ್ರಗಳ ವಿತರಣೆ, ಹತ್ತು ಫಲಾನುಭಾವಿಗಳಿಗೆ ಟರ್ಪಾಲ್ ಗಳ ಸವಲತ್ತು ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ಉಪ ಕೃಷಿ ನಿರ್ದೇಶಕರ ಶಿವ ಶಂಕರ , ಉಪಕೃಷಿ ಸಹಾಯಕ ಅಧಿಕಾರಿ ಗುರು ಪ್ರಸಾದ್ ಸಿಬ್ಬಂದಿ ವರ್ಗ, ಹಾಗೂ ನೂರಕ್ಕೂ ಹೆಚ್ಚು ಫಲಾನುಭವಿಗಳು ಉಪಸ್ಥಿತರಿದ್ದರು.